ಸಾಧನೆಗೆ ಅಂಗವೈಕಲ್ಯತೆ ಅಡ್ಡಿಯಾಗಲಾರದು - ಬಸವರಾಜ ಉಮ್ರಾಣಿ

01GDG06
Published on

ಗದಗ: ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯು ವಿದ್ಯಾಥಿರ್ಗಳ ಕಲಿಕಾ ಗುಣಮಟ್ಟವನ್ನು ಹೆಚ್ಚಿಸಲು ವಿವಿಧ ಕ್ಷೇತ್ರದ ಸಾಧಕರನ್ನು ಕರೆಸಿ ಅವರಿಂದ ವಿದ್ಯಾಥಿರ್ಗಳಿಗೆ ಮಾರ್ಗದರ್ಶನವನ್ನು ನೀಡುವ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಶ್ಲಾನೀಯ ಎಂದು ಸಾಧಕ ಬಸವರಾಜ ಉಮ್ರಾಣಿ ಹೇಳಿದರು.

ನಗರದ ಚಿಕ್ಕಟ್ಟಿ ಸಂಸ್ಥೆಯಲ್ಲಿ ಬುಧವಾರ ಜರುಗಿದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಯದ ಸದ್ಭಳಕೆ, ಯಾವ ಸಮಯದಲ್ಲಿ ಹೇಗೆ ಓದುವುದು, ಓದಿದ್ದನ್ನು ನೆನಪಿನಲ್ಲಿ ಇಟ್ಟುಕೊಳ್ಳವ ಬಗೆ, ಗಣಿತದ ಸಮಿಕರಣಗಳನ್ನು ಸರಳವಾಗಿ ಬಿಡಿಸುವ ಕುರಿತಾಗಿ ವಿದ್ಯಾಥಿರ್ಗಳಿಗೆ ಮಾರ್ಗದರ್ಶನ ನೀಡಿದರು.

ಪ್ರೊ. ಸಿದ್ದು ಯಪ್ಲಾಪರವಿ ಮಾತನಾಡಿ, ವಿಶ್ವದಲ್ಲಿಯೇ ಪ್ರಥಮವಾಗಿ ಕುರುಡು ವ್ಯಕ್ತಿ ವೈದ್ಯನಾದ ಡೇವಿಡ್​ ಹಾರ್ಡಮನ್​ ರವರ ಜೀವನ ಸಾಧನೆಯನ್ನು ವಿವರಿಸಿದರು. ಛಲಬಿಡದೆ ಹಿಡಿದ ಕಾರ್ಯವನ್ನು ರ್ಪೂಣಗೊಳಿಸುವ ಆಶಾವಾದಿಗಳಾಗಬೇಕೆಂದು ತಿಳಿಸಿದರು.

ಎಸ್​.ವೈ. ಚಿಕ್ಕಟ್ಟಿ ಪ್ರಾಸ್ತಾವಿಕ ಮಾತನಾಡಿದರು ಪ್ರಾಚಾರ್ಯ ಪ್ರೊ. ವಿನಯ ಚಿಕ್ಕಟ್ಟಿ, ಶೋಭಾ ಸ್ಥಾವರಮಠ, ಹೇಮಲತಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net