ಶಾಸಕರು ಅಭಿಪ್ರಾಯ ಹೇಳಿದರೆ ತಪ್ಪಲ್ಲ:ರಾಯರಡ್ಡಿ

Basavaraj Rayaraddi mla yalaburga minister
Basavaraj Rayaraddi
Published on

ಕೊಪ್ಪಳ: ಶಾಸಕರು ಎರಡುವರೆ ವರ್ಷದ ಬಳಿಕ ತಾವು ಸಚಿವರಾಗುತ್ತೇವೆ ಎಂದು ಹೇಳುವುದರಲ್ಲಿ ತಪ್ಪೇನಿದೆ ? ಅದು ಅವರ ಅಭಿಪ್ರಾಯ ಎಂದು ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.

ಬೆಳಗಾವಿಯಲ್ಲಿ ಏನೂ ಆಗಿಲ್ಲ. ಅನವಶ್ಯಕವಾಗಿ ವಿವಾದ ಸೃಷ್ಟಿ ಮಾಡಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ ಧಾರ್ಮಿಕ ಕಾರ್ಯಕ್ರಮಕ್ಕೆ ತ್ವರಿತವಾಗಿ ಹೋಗಿದ್ದಾರೆ. ಹೀಗಾಗಿ ಕೆಲ ಶಾಸಕರನ್ನು ಭೇಟಿ ಮಾಡಲು ಆಗಿಲ್ಲವೆಂದು ಅವರೇ ಹೇಳಿದ್ದಾರೆ.

ಯಾವುದೇ ಸಮಸ್ಯೆ ಇಲ್ಲ. ಇನ್ನು 4 ವರ್ಷ 8 ತಿಂಗಳು ನಮ್ಮ ಸರ್ಕಾರ ಭದ್ರವಾಗಿರಲಿದೆ. ಶಾಸಕ ಅಶೋಕ ಪಟ್ಟಣ ಎರಡುವರೆ ವರ್ಷ ಬಳಿಕ ತಾವು ಸಚಿವರಾಗುತ್ತೇವೆ ಎಂದು ಹೇಳುವುದರಲ್ಲಿ ತಪ್ಪೇನಿದೆ ? ಅದು ಅವರ ಅಭಿಪ್ರಾಯ.

ನಾನು ಸಚಿವ ಆಗುತ್ತೇನೋ, ಇಲ್ಲವೋ ಗೊತ್ತಿಲ್ಲ. ಅದೆಲ್ಲ ಸಿಎಂ ಸಿದ್ದರಾಮಯ್ಯ ಹಾಗೂ ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ಶನಿವಾರ ಸುದ್ದಿಗಾರರನ್ನುದ್ದೇಶಿಸಿ ತಿಳಿಸಿದರು.

ಸದ್ಯದ ರಾಜಕಾರಣ ಸರಿ ಇಲ್ಲ. ಎಲ್ಲ ಪಕ್ಷದಲ್ಲಿ ಅಭಿವೃದ್ಧಿಗಿಂತ ಹಣ, ಜಾತಿ ಮುಖ್ಯವಾಗಿದೆ. ಮುಂದೆ ಇದು ಸರಿ ಆಗುತ್ತಾ, ಇಲ್ಲವೋ ಗೊತ್ತಿಲ್ಲ. ನನಗೂ 67 ವರ್ಷ ವಯಸ್ಸಾಗಿದೆ. ರಾಜಕಾರಣದಿಂದ ದೂರ ಉಳಿಯಬೇಕು ಅನಿಸುತ್ತಿದೆ. ಬಸವರಾಜ ರಾಯಡ್ಡಿ. ಯಲಬುರ್ಗಾ ಶಾಸಕ.

ಬಸವರಾಜ ರಾಯಡ್ಡಿ. ಯಲಬುರ್ಗಾ ಶಾಸಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net