

ಕಾನೂನಾತ್ಮಕ, ಸಂವಿಧಾನಾತ್ಮಕ ರಣೆ ಒದಗಿಸುವಂತೆ ಸಿಎಂ ಅವರಿಗೆ ಸಭಾಪತಿ ಬಸವರಾಜ ಹೊರಟ್ಟಿ ಪತ್ರ.
ವಿಜಯವಾಣಿ ಸುದ್ದಿಜಾಲ ಗದಗ
ಸರ್ಕಾರಿ ಪ್ರೌಢಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯ ಶಿಕರಿಗೆ ಸೂಕ್ತ ಕಾನೂನಾತ್ಮಕ, ಸಂವಿಧಾನಾತ್ಮಕ ರಣೆ ಒದಗಿಸುವ ವಿಷಯದಲ್ಲಿ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿರುವುದು ವಿಷಾಧನೀಯ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಈ ಕುರಿತು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ಸರ್ಕಾರಿ ಪ್ರೌಢಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಶಿಕರುಗಳಿಗೆ 2024 25ನೇ ಸಾಲಿನ ಶೈಣಿಕ ಅವಧಿಯಲ್ಲಿ ಅಹಿತಕರ ಟನೆಗಳ ಪ್ರಕರಣಗಳು ಹೆಚ್ಚಾಗಿವೆ ಎಂದು ರಾಜ್ಯ ಮುಖ್ಯ ಶಿಕರ ಒಕ್ಕೂಟ, ರಾಷ್ಟ್ರೀಯ ಮಹಿಳಾ ದೌರ್ಜನ್ಯ ನಿಯಂತ್ರಣ ದಳದಿಂದ ಹಾಗೂ ಸಮೂಹ ಮಾಧ್ಯಮಗಲ್ಲಿ ವರದಿಗಳು ಪ್ರಕಟವಾಗಿವೆ. ಈ ಹಿನ್ನೆಲೆ ಮಹಿಳಾ ಮುಖ್ಯಶಿಕರಿಗೆ ಸೂಕ್ತ ಕಾನೂನಾತ್ಮಕ ಸಂವಿಧಾನಾತ್ಮಕ ರಣೆ ಒದಗಿಸುವ ನಿಟ್ಟಿನಲ್ಲಿ ಮುಖ್ಯ ಶಿಕ್ಷಕಿಯರ ಸೂಕ್ತ ರಣೆ ಮತ್ತು ಸೇವಾ ಭದ್ರತೆಯನ್ನು ಒದಗಿಸುವಂತೆ ರಾಷ್ಟ್ರೀಯ ಶಿಣ ಆಡಳಿತ ಸುಧಾರಣೆ ಮತ್ತು ತನಿಖಾ ಪ್ರಾದೇಶಿಕ ದಳ ಅಧಿಕಾರಿಗಳು ಶಾಲಾ ಶಿಣ ಮತ್ತು ಸಾಕ್ಷರತಾ ಇಲಾಖೆಗೆ ಪತ್ರ ಬರೆದು ರಕ್ಷಣೆ ನೀಡುವಂತೆ ಕೋರಿದ್ದಾರೆ. ರಾಜ್ಯ ಶಾಲಾ ಶಿಣ ಇಲಾಖೆಯ ಕೆಲವು ದೇಶದ್ರೋಹಿ ಭ್ರಷ್ಟ ಅಧಿಕಾರಿಗಳು, ಸಿಬ್ಬಂದಿಗಳು, ಉಪನಿರ್ದೇಶಕರ ಕಛೇರಿಯ ಕೆಲವು ಸಿಬ್ಬಂದಿಗಳು, ಸಹ ಶಿಕ್ಷಕಿಯರ, ಸ್ಥಳಿಯ ಕೆಲವು ಪುಢಾರಿ ಜಾತಿವಾದಿ ರಾಜಕಾರಣಿಗಳು ತಾಲೂಕು ಹಾಗೂ ಗ್ರಾಮೀಣ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮುಖ್ಯ ಶಿಕರಿಗೆ ಅನಾವಶ್ಯಕವಾಗಿ ಟಾರ್ಗೆಟ್ ಮಾಡಿ ತಾವೇ ಕಾನೂನು ಬಾಹಿರ ಆದೇಶ ಮಾಡಿ ಗೊಂದಲಗಳನ್ನು ಸೃಷ್ಟಿಸಿ, ಪದೇ ಪದೆ ನೋಟೀಸ್ ನೀಡುತ್ತಿದ್ದಾರೆ. ಅಮಾನತ್ತು ಮಾಡಿಸಲು ಷಡ್ಯಂತ್ರ ರೂಪಿಸಿ ವರ್ಗಾವಣೆ ಮಾಡುತ್ತಿದ್ದಾರೆ. ಹಣಕ್ಕಾಗಿ ಪೀಡಿಸುವುದು, ಲೈಂಗಿಕ ದೌರ್ಜನ್ಯ ನಡೆಸುವುದು, ಕೊಲೆ ಬೆದರಿಕೆ ಹಾಕುವುದು ಈ ರೀತಿಯ 185ಕ್ಕಿಂತಲೂ ಅಧಿಕ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ವರದಿಗಳಲ್ಲಿ ಉಲ್ಲೇಖಿಸಿದ್ದಾರೆ. ಹಾಗಾಗಿ ಯಾವುದೇ ಮುಖ್ಯ ಶಿಕರನ್ನು ವರ್ಗಾವಣೆ ಮಾಡುವ ಮುನ್ನ ಮುಖ್ಯ ನ್ಯಾಯಾಧೀಶರ, ರಾಜ್ಯಪಾಲರ, ಮುಖ್ಯಮಂತ್ರಿಗಳ ಅನುಮೋದನೆ ಪಡೆದು ಸೂಕ್ತವಾದ ವಿಚಾರ ನಡೆಸಿ ಸತ್ಯಾಂಶದ ಆಧಾರದ ಮೇಲೆ ತದನಂತರ ವರ್ಗಾವಣೆ ಮಾಡಬೇಕು ಎಂದು ಹೊರಟ್ಟಿ ಒತ್ತಾಯಿಸಿದ್ದಾರೆ.
ಗ್ರಾಮದ, ತಾಲೂಕಿನ ಕೆಲವು ಕಿಡಿಗೇಡಿ ವ್ಯಕ್ತಿಗಳ ಸಂಪರ್ಕದಿಂದ ಮುಖ್ಯ ಶಿಕ್ಷಕಿಯರ ಸುಳ್ಳು ಮೂಕಜಿರ್ಗಳನ್ನು ಉನ್ನತ ಅಧಿಕಾರಿಗಳ ಕಛೇರಿಗೆ ಬರೆದು ಮುಖ್ಯ ಶಿಕರ ನತೆ ಗೌರವಕ್ಕೆ ಧಕ್ಕೆ ತರುವುದು, ಮಾನಸಿಕ ಕಿರುಕುಳ ನೀಡುವುದು, ಕೊಲೆ ಬೆದರಿಕೆ ಹಾಕುವ ಪ್ರಕರಣ ಕಂಡುಬಂದಿದೆ. ಇಂತಹ ಪ್ರಕರಣಗಳು ರಾಜ್ಯದ, ದೇಶದ ಸಂವಿಧಾನದ ಹಿತಾಸಕ್ತಿಗೆ ಧಕ್ಕೆ ತರುತ್ತಿವೆ. ಯಾವುದೇ ಅಹಿತಕರ ಟನೆಗಳು ಸಂಭವಿಸದಂತೆ ಮುಖ್ಯ ಶಿಕರಿಗೆ ಸೂಕ್ತ ರಣೆ ಮತ್ತು ಸೇವಾ ಭದ್ರತೆಯನ್ನು ಒದಗಿಸುವಂತೆ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿಯವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.