ಪ್ರಜಾಪ್ರಭುತ್ವ ಮತ್ತು ಸಂವಿಧಾನ ಭಾರತೀಯರ ಪಾಲಿಗೆ ಉಸಿರು: ಸಭಾಪತಿ ಬಸವರಾಜ ಹೊರಟ್ಟಿ.

26GDG04
Published on

ವಿಜಯವಾಣಿ ಸುದ್ದಿಜಾಲ ಗದಗ
ಜಗತ್ತಿನಲ್ಲಿಯೇ ಹೆಚ್ಚು ಜನಸಂಖ್ಯೆ ಹೊಂದಿದ ಸಾವಿರಾರು ಜಾತಿ, ಮತ, ಪಂಗಡಗಳನ್ನು ಒಳಗೊಂಡ ಭಾರತ ದೇಶದಲ್ಲಿ ವಿವಿಧತೆಯಲ್ಲಿ ಏಕತೆ ಮೂಡಲು ಬಾಬಾಸಾಹೇಬ ಅಂಬೇಡ್ಕರ್​ ನೇತೃತ್ವದ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಕಾರಣ. ಹೀಗಾಗಿ ಭಾರತೀಯರ ಪಾಲಿಗೆ ಇವೆರಡೂ ಉಸಿರು ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಸಿದ್ಧಲಿಂಗ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಬನ್ನಿ ಮುಡಿಯುವ ಕಾರ್ಯಕ್ರಮ, ವಿವಿಧ ಕಟ್ಟಡಗಳ ಕಾಮಗಾರಿಗಳ ವೀಣೆ ಹಾಗೂ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಕುರಿತು ವಿದ್ಯಾಥಿರ್ಗಳೊಂದಿಗೆ ಏರ್ಪಡಿಸಿದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೊಡ್ಡವರಿದ್ದರೂ, ಶ್ರೀಮಂತರಿದ್ದರೂ ಎಲ್ಲರಿಗೂ ಒಂದೇ ಮತ. ಆ ಮತದ ಮಹತ್ವದ ಮೇಲೆ ಪ್ರಜಾಪ್ರಭುತ್ವ, ಪ್ರಜೆಗಳ ಹಕ್ಕು ಗಟ್ಟಿಯಾಗಿ ನೆಲೆಯೂರಿದೆ. ಈ ದೇಶದ, ರಾಜ್ಯದ ಜನಪ್ರತಿನಿಧಿಗಳನ್ನು ಆಯ್ಕೆಮಾಡುವ ಅವಕಾಶ ಇರುವುದು ಈ ದೇಶದ ಪ್ರಜೆಗಳಿಗೆ ಮಾತ್ರ. ಅದನ್ನು ಅರಿತು ದೇಶದ ಹಿತ ಕಾಯುವ ಯೋಗ್ಯರಿಗೆ ಮತ ನೀಡುವ ಅವಕಾಶವಿದೆ ಎಂದರು.
ಕಾರ್ಯಕ್ರಮ ನಂತರ ಶಾಲಾ ಸಿಬ್ಬಂದಿ, ವಿದ್ಯಾಥಿರ್ಗಳು ಬನ್ನಿ ನೀಡುವ ಮೂಲಕ ವಿಜಯದಶಮಿಯನ್ನು ಆಚರಿಸಿದರು. ಡಾ. ಬಸವರಾಜ ಧಾರವಾಡ, ಡಿಡಿಪಿಐ ಎಂ. ಎ. ರಡ್ಡೇರ, ಆರ್​. ಎಸ್​. ಬುರಡಿ, ವಿದ್ಯಾವತಿ ಗಡಗಿ, ಎಸ್​. ಎಂ. ಅಗಡಿ, ಪಾರ್ವತಿ ವಸ್ತ್ರದ, ಜಯಲಕ್ಷಿ$್ಮ ಅಣ್ಣಿಗೇರಿ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net