ಬಸವರಾಜ ಗುರಿಕಾರ ಅಭಿನಂದನಾ ಸಮಾರಂಭ

5 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಬಸವರಾಜ ಗುರಿಕಾರ ಅವರು ಸಂಘಟನೆ, ಕ್ರಿಯಾಶೀಲತೆ ಮತ್ತು ಕಾರ್ಯದಕ್ಷತೆಯಿಂದ ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಶನ್​ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಇದು ರಾಜ್ಯಕ್ಕೆ ಸಂದ ಗೌರವವಾಗಿದೆ ಎಂದು ಶಾಸಕ ಎನ್​.ಎಚ್​. ಕೋನರಡ್ಡಿ ಹೇಳಿದರು.

ರಾಷ್ಟ್ರೀಯ ಅಧ್ಯಕ್ಷರಾಗಿ ಬಸವರಾಜ ಗುರಿಕಾರ ಆಯ್ಕೆಯಾದ ನಿಮಿತ್ತ ನಗರದ ಸರ್ಕಾರಿ ನೌಕರರ ಭವನದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಹಾಗೂ ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರ ಸಂಘಟನೆಗಳ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಉತ್ತರ ಭಾರತ ಪ್ರಾಬಲ್ಯದ ಮಧ್ಯೆ ದಕ್ಷಿಣ ಭಾರತದವರು ರಾಷ್ಟ್ರ ಮಟ್ಟದ ಹುದ್ದೆ ಪಡೆದಿರುವುದು ಸಾಮಾನ್ಯ ವಿಷಯವಲ್ಲ. ಅಷ್ಟೊಂದು ದೊಡ್ಡ ಮಟ್ಟದಲ್ಲಿ ಸ್ಥಾನ ಪಡೆಯುವುದು ಕಷ್ಟವಿದೆ. ಆದರೆ, ಬಸವರಾಜ ಗುರಿಕಾರ ತಮ್ಮ ನಿರಂತರ ಚಟುವಟಿಕೆಗಳ ಮೂಲಕ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಗುರಿಕಾರ, ರಾಷ್ಟ್ರೀಯ ಅಧ್ಯಕ್ಷನಾಗಲು ಜಿಲ್ಲೆಯ ಎಲ್ಲ ಶಿಕ್ಷಕರ, ನೌಕರರ ಬೆಂಬಲ, ಪ್ರೋತ್ಸಾಹವೇ ಕಾರಣ ಎಂದರು.

ಎಸ್​.ಎಫ್​. ಸಿದ್ಧನಗೌಡರ ಅಧ್ಯಕ್ಷತೆ ವಹಿಸಿದ್ದರು. ಮಂಜುನಾಥ ಯಡಳ್ಳಿ, ಆರ್​.ಬಿ. ಲಿಂಗದಾಳ, ದೇವಿದಾಸ ಶಾಂತಿಕರ, ರಾಜಶೇಖರ ಬಾಣದ, ಮಲ್ಲಿಕಾರ್ಜುನ ಸೊಲಗಿ, ವೈ.ಎಚ್​. ಬಣವಿ, ಗಿರೀಶ ಚೌಡಕಿ, ರಾಜಶೇಖರ ಹೊನ್ನಪ್ಪನವರ, ಡಾ. ಸುರೇಶ ಹಿರೇಮಠ, ಆರ್​.ಆರ್​. ಬಿರಾದಾರ, ಮಂಜುನಾಥ ಜಂಗಳಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net