

ಚಿಕ್ಕೋಡಿ: ಜೀವನದ ಸಾರ್ಥಕ್ಯದ ಪ್ರತಿಕವಾಗಿ ಶಿಣ ಕ್ರಾಂತಿ ಮಾಡಿದ ಬಸವಪ್ರಭು ಕೋರೆ ಆದರ್ಶಗಳು ಸುಸಂಸತ ಸಮಾಜ ನಿರ್ಮಿಸಲು ಯುವಜನಾಂಗಕ್ಕೆ ದಾರಿದೀಪವಾಗಿವೆ ಎಂದು ನಿವತ್ತ್ತ ಪ್ರಾಚಾರ್ಯ ಡಾ.ಎಂ.ಟಿ.ಕುರಣಿ ಹೇಳಿದರು.
ಇಲ್ಲಿನ ಕೆಎಲ್ಇ ಸಂಸ್ಥೆಯ ಬಸವಪ್ರಭು ಕೋರೆ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬಸವಪ್ರಭು ಕೋರೆ 134ನೇ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೆಲವರು ನಿಸ್ವಾರ್ಥದ ಜೀವನ ಮೆಲುಕು ಹಾಕಿ ಬದುಕುತ್ತಾರೆ. ಮತ್ತೆ ಕೆಲವರು ವರ್ತಮಾನದ ಸುಖದ ಸುಪ್ಪತ್ತಿಗೆಯಲ್ಲಿ ಕಾಲಹರಣ ಮಾಡುತ್ತಾರೆ. ಇನ್ನೂ ಕೆಲವರು ವರ್ತಮಾನದೊಂದಿಗೆ ಜನರಿಗಾಗಿ ಭವಿಷ್ಯ ಕಟ್ಟಿ ಇತಿಹಾಸವೇ ಆಗುತ್ತಾರೆ. ಅಂತಹ ಸಾಲಿನಲ್ಲಿ ಶ್ರೀಮಂತ ಬಸವಪ್ರಭು ಕೋರೆ ಮುಂಚೂಣಿಯಲ್ಲಿ ಇದ್ದಾರೆ ಎಂದರು.
ಅವರಿಗೆ ಸಮಾಜದ ಉದ್ಧಾರ ಪ್ರಮುಖ ಕಾಳಜಿಯಾಗಿತ್ತು. ಬ್ರಿಟಿಷರು ಭಾರತೀಯರ ಮೇಲೆ ದಬ್ಬಾಳಿಕೆ ಮಾಡಿ ಹಿಂಸಿಸುತ್ತಿದ್ದರು. ಬ್ರಿಟಿಷರ ವಿರುದ್ಧ ಹೋರಾಡಿ ಜೆಲು ಶಿೆ ಅನುಭವಿಸಿದರೂ ಎದೆಗುಂದದೆ ದೇಶಸೇವೆ ಮುಂದುವರಿಸಿದರು. ವ್ಯಾಪಾರ, ಕಷಿ, ಶಿಣ, ಸಮಾಜಸೇವೆ, ದೀನ ದಲಿತರ ಉದ್ಧಾರಕ್ಕೆ ಅವಿರತವಾಗಿ ಸೇವೆ ಸಲ್ಲಿಸಿದ ಸಾಧಕ ಎಂದರು.
ಅಧ್ಯತೆ ವಹಿಸಿದ್ದ ಡಾ.ಪ್ರಸಾದ ರಾಂಪುರೆ ಮಾತನಾಡಿ, ಬಸವಪ್ರಭು ಕೋರೆ ಸಮಾಜಸೇವೆ, ಕಷಿ, ಶಿಣ, ವ್ಯಾಪಾರ ೇತ್ರದಲ್ಲಿ ಅಪಾರ ಸಾಧನೆ ಮಾಡಿ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ ಎಂದರು. ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಸುಭಾಷ ಕವಲಾಪುರೆ, ಎನ್.ಎಸ್.ವಂಟಮುತ್ತೆ, ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಪ್ರಕಾಶ ಕೋಳಿ, ಕಾನೂನು ಮಹಾವಿದ್ಯಾಲಯ ಪ್ರಾಚಾರ್ಯ ಡಿ.ಬಿ.ಸೊಲ್ಲಾಪುರೆ ಉಪಸ್ಥಿತರಿದ್ದರು. ಪ್ರಾಚಾರ್ಯ ಡಾ.ಬಿ.ಜಿ.ಕುಲಕರ್ಣಿ ಸ್ವಾಗತಿಸಿದರು. ಪದ್ಮಶ್ರೀ ಚೌಗಲಾ ಮತ್ತು ಸಿದ್ದಣ್ಣ ನಾಯಕ ನಿರೂಪಿಸಿದರು. ಡಾ.ವಿನಾಯಕ ಮಂಜಲಾಪುರ ವಂದಿಸಿದರು.