

ಬಸವಾಪಟ್ಟಣ: ಗ್ರಾಮದ ರಸ್ತೆ ಬದಿ, ಮನೆಗಳ ಸುತ್ತಮುತ್ತ ಹಾಗೂ ಚರಂಡಿಗಳಲ್ಲಿ ಕಸ ಎಸೆದು ಪರಿಸರ ಹಾಳು ಮಾಡುವವರಿಗೆ ಕಾಯ್ದೆ ಪ್ರಕಾರ ದಂಡ ವಿಧಿಸಲಾಗುವುದು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಟಿ.ಎಸ್. ಅನಿಲ್‌ಕುಮಾರ್ ಎಚ್ಚರಿಸಿದ್ದಾರೆ.
ಗ್ರಾಮದ ಮುಖ್ಯರಸ್ತೆ ಪಕ್ಕ ನಿರಂತರವಾಗಿ ಕಸ ಸುರಿದ ಕಾರಣ ದೊಡ್ಡ ರಾಶಿ ನಿರ್ಮಾಣ ಆಗಿದೆ. ಕಸ ಸಂಗ್ರಹಣೆಗೆ ನಿತ್ಯವೂ ಮನೆಗಳ ಮುಂದೆ ವಾಹನ ಬಂದರೂ ಗ್ರಾಮಸ್ಥರು ರಸ್ತೆ ಬದಿ ಸುರಿಯುವುದುನ್ನು ನಿಲ್ಲಿಸಿಲ್ಲ ಎಂದು ಅಸಮಾಧಾನ ವುಕ್ತಪಡಿಸಿದ್ದಾರೆ.
ಗ್ರಾಮದಲ್ಲಿ ಸೊಳ್ಳೆಗಳು ಹೆಚ್ಚಾಗಿದ್ದು ಸಾಂಕ್ರಾಮಿಕ ರೋಗದ ಭೀತಿ ಆವರಿಸಿದೆ. ಕಸ ನಿರ್ವಹಣೆ ಮಾಡುವುದು ಪಂಚಾಯಿತಿ ಕಚೇರಿ ಸಿಬ್ಬಂದಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇನ್ಮುಂದೆ ರಸ್ತೆ ಬದಿ ಕಸ ಎಸೆದರೆ ದಂಡ ವಿಧಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.