ಬೈಕ್ ಡಿಕ್ಕಿಯಾಗಿ ಗೃಹಿಣಿ ಸಾವು

Crime Logo
Published on

ಬಸವಾಪಟ್ಟಣ: ಸಮೀಪದ ಚಿರಡೋಣಿ ಗ್ರಾಮದಲ್ಲಿ ಸೋಮವಾರ ರಾತ್ರಿ ಬೈಕ್ ಡಿಕ್ಕಿಯಾಗಿ ಪುಟ್ಟಪ್ಪಜ್ಜಾರ ಜಯಮ್ಮ( 68) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ರಾತ್ರಿ ಊಟ ಮುಗಿಸಿಕೊಂಡು ಜಯಮ್ಮ ರಸ್ತೆ ಬಳಿ ವಾಯುವಿಹಾರ ಮಾಡುತ್ತಿದ್ದಾಗ, ಬಸವಾಪಟ್ಟಣದಿಂದ ಬೆಳಲಗೆರೆ ಗ್ರಾಮಕ್ಕೆ ವೇಗವಾಗಿ ತೆರಳುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತರಾಗಿದ್ದಾರೆ. ಈ ಕುರಿತು ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net