ಮಹಾತ್ಮರ ತತ್ವಾದರ್ಶ ಸರ್ವರಿಗೂ ವೇದ್ಯ

Basavapatna, Valmiki, Jayantyutsava,
Published on

ಬಸವಾಪಟ್ಟಣ: ಭರತ ಭೂಮಿ ಕಂಡ ಅನೇಕ ಸಾಧು, ಸಂತರಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿಯೂ ಒಬ್ಬರು. ಅವರು ಜಗತ್ತಿಗೆ ರಾಮಾಯಣದಂತಹ ಮಹಾನ್ ಕಾವ್ಯ ನೀಡಿದ್ದಾರೆ ಎಂದು ಚಿರಡೋಣಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಮಲಮ್ಮ ಹೇಳಿದರು.

ಚಿರಡೋಣಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಮಹಾತ್ಮರ ತತ್ವಾದರ್ಶಗಳು ಒಂದು ಜಾತಿ, ಮತ, ಪಂಥಕ್ಕೆ ಸೀಮಿತವಾಗಿಲ್ಲ. ಅವು ಸರ್ವರಿಗೂ, ಸರ್ವಕಾಲಕ್ಕೂ ವೇದ್ಯವಾದವು. ಹಾಗಾಗಿ, ಅಂತಹ ತತ್ವಾದರ್ಶಗಳನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಉಪಾಧ್ಯಕ್ಷ ಎಂ.ಎ.ಗೋಪಾಲ್ ರಾವ್, ಪಿಡಿಒ ತಿಪ್ಪೇಸ್ವಾಮಿ, ಕಾರ್ಯದರ್ಶಿ ಅಶೋಕ್, ಸದಸ್ಯರಾದ ಗೀತಮ್ಮ, ಕೆ.ಎಸ್.ಕಾಂತರಾಜ್, ಜಿ.ಎಸ್.ಶೇಖರಪ್ಪ ಗೌಡ, ಗ್ರಂಥಾಲಯ ನಿರ್ವಾಹಕಿ ತಾರಾದೇವಿ, ಮಲ್ಲಿಕಪ್ಪ, ಅಶೋಕ್, ರುದ್ರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net