ಒಂದೇ ದಿನ ಮೂರು ಮನೆಗಳಲ್ಲಿ ಕಳವು

Basavapatna, Thieves, Cupboard, Clothes,
Published on

ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

ಬಸವಾಪಟ್ಟಣ: ಸಮೀಪದ ಕೋಟೆಹಾಳ್ ಮತ್ತು ಹರೋಸಾಗರದ ಗ್ರಾಮದ ಮೂರು ಮನೆಗಳ ಬೀಗ ಮುರಿದು ಹಣ, ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.

ಕೋಟೆಹಾಳ್‌ನ ಸುನಿಲ್ ಪಾಟೀಲ್ ಮನೆ ಬಾಗಿಲು ಮುರಿದು ಸುಮಾರು 6.10 ಲಕ್ಷ ಮೌಲ್ಯದ 12 ತೊಲ ಚಿನ್ನ, 25,000 ನಗದು ಹಾಗೂ ಹರೋಸಾಗರದ ರೇಖಾ ಮನೆಯಲ್ಲಿ 2.10 ಲಕ್ಷ ರೂ ನಗದು, 8 ಗ್ರಾಂ ಚಿನ್ನದ ಸರ, ಚಿನ್ನದ 2 ಹಾಗೂ 2 ಬೆಳ್ಳಿಯ ಕುಂಕುಮ ಬಟ್ಟಲು, ಹತ್ತು ಸಾವಿರ ಬೆಲೆಬಾಳುವ ಎರಡು ಬೆಳ್ಳಿ ಚೌಕ ಕಳುವಾಗಿವೆ.

ನಂತರ ಪಕ್ಕದ ಮನೆಯ ನಿಂಗಪ್ಪ ಮನೆಯ ಬೀರು ಒಡೆದಿದ್ದಾರೆ. ಭಾನುವಾರ ರಾತ್ರಿ 12ರ ವರೆಗೂ ಶ್ವಾನದಳ, ಬೆರಳಚ್ಚುಗಾರ ತಂಡದಿಂದ ಪರಿಶೀಲನೆ ನಡೆಸಿದ್ದಾರೆ.

ಇದು ಅಂತರ್‌ರಾಜ್ಯ ಕಳ್ಳರ ಕೃತ್ಯವಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಬಸವಾಪಟ್ಟಣ ಪೊಲೀಸ್ ಠಾಣಾಧಿಕಾರಿ ಎಚ್.ಕೆ. ವೀಣಾ ಪರಿಶೀಲಿಸಿ, ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net