ಹರೋಸಾಗರದಲ್ಲಿ ಕಳೆನಾಶಕ ಸಿಂಪಡಿಸಿ ಭತ್ತ ನಾಶ

Basavapatna, paddy, weed killer, spraying,
Published on

ಕಿಡಿಗೇಡಿಗಳಿಂದ ಕೃತ್ಯ I ಗ್ರಾಮಸ್ಥ ನಾಗರಾಜ್ ಆರೋಪ

ಬಸವಾಪಟ್ಟಣ: ಸಮೀಪದ ಹರೋಸಾಗರ ಗ್ರಾಮದಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಎರಡು ಮುಕ್ಕಾಲು ಎಕರೆ ಭತ್ತದ ಗದ್ದೆಗೆ ಕಿಡಿಗೇಡಿಗಳು ಭಾನುವಾರ ರಾತ್ರಿ ಕಳೆನಾಶಕ ಸಿಂಪಡಿಸಿ ನಾಶಪಡಿಸಿದ್ದಾರೆ.

ಚಿರಡೋಣಿ ಗ್ರಾಮದ ರೈತ ಹಾಲೇಶ್ ದೇವರ ಜಮೀನು ಗುತ್ತಿಗೆ ಪಡೆದು ಭತ್ತ ನಾಟಿ ಮಾಡಿದ್ದರು. ಸೋಮವಾರ ಬೆಳಗ್ಗೆ ಗದ್ದೆಗೆ ತೆರಳಿ ನೋಡಿದಾಗ ಕಳೆನಾಶಕ ಔಷಧ ಸಿಂಪರಣೆಯಿಂದ ಬೆಳೆ ಅಲ್ಲಲ್ಲಿ ಒಣಗಿ ಸುಟ್ಟಿರುವುದು ಕಂಡುಬಂದಿದೆ.

ಹರೋಸಾಗರ ಗ್ರಾಮಸ್ಥ ನಾಗರಾಜ್ ಮಾತನಾಡಿ, ದೇವರ ಜಮೀನು ಗುತ್ತಿಗೆ ಪಡೆದು ಉತ್ತಮ ಫಸಲು ತೆಗೆಯಲು ಮುಂದಾಗಿದ್ದ ರೈತ ಹಾಲೇಶ್ ತುಂಬಾ ಶ್ರಮದಿಂದ ಉಳುಮೆ ಮಾಡಿ ಭತ್ತ ನಾಟಿ ಮಾಡಿದ್ದರು. ಇದನ್ನು ಸಹಿಸಲಾಗದೆ ಕಿಡಿಗೇಡಿಗಳು ಬೆಳೆಗೆ ಕಳೆನಾಶಕ ಔಷಧ ಸಿಂಪಡಿಸಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡುತ್ತೇವೆ ಎಂದು ತಿಳಿಸಿದರು.

ಗ್ರಾಮಸ್ಥರಾದ ಪಿ. ಮಂಜಪ್ಪ, ಎಂ.ಬಿ. ಹಾಲೇಶ್, ಪಿ.ಬಿ. ಹೇಮಣ್ಣ, ಎಚ್. ಹಾಲೇಶ್, ಎ.ಕೆ. ರಂಗಪ್ಪ, ವೈ.ಪಿ. ನಾಗರಾಜ್, ಎಚ್.ಪಿ. ಚನ್ನಬಸಪ್ಪ, ಅಗಸರ ಹಾಲೇಶ್, ಎನ್. ಲಿಂಗರಾಜ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net