ಮಹಾತ್ಮರ ಜಯಂತಿಗಳು ಜಾತಿಗೆ ಸೀಮಿತವಲ್ಲ

Basavapatna, Jayantyutsava,
Published on

ಬಸವಾಪಟ್ಟಣ: ಮಹಾತ್ಮರ ಜಯಂತಿಗಳು ಯಾವುದೇ ಜಾತಿ, ಮತಕ್ಕೆ ಸೀಮಿತವಲ್ಲ ಎಂದು ಪತ್ರಕರ್ತ ಎಂ.ಬಿ.ರಾಜಪ್ಪ ತಿಳಿಸಿದರು.

ಸಮೀಪದ ಚಿರಡೋಣಿ ಭಗೀರಥ ಕಾಲನಿಯಲ್ಲಿ ಬುಧವಾರ ರಾತ್ರಿ ಶ್ರೀ ಮಾತಾ ಕಲಾ ಅಕಾಡೆಮಿ ಹಮ್ಮಿಕೊಂಡಿದ್ದ ಬಸವ, ಅಂಬೇಡ್ಕರ್, ಭಗೀರಥ ಹಾಗೂ ಶಂಕರಾಚಾರ್ಯರ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ಎಲ್ಲ ಮಹಾತ್ಮರ ತತ್ವಾದರ್ಶಗಳು ಸರ್ವಕಾಲಕ್ಕೂ ಸರ್ವರಿಗೂ ವೇದ್ಯವಾಗುವಂಥವು. ಅವುಗಳನ್ನು ಎಲ್ಲರೂ ಜೀವನದಲ್ಲಿ ರೂಢಿಸಿಕೊಂಡು ನಡೆದಾಗ ಮಾತ್ರ ಸಮಾಜದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂದು ಹೇಳಿದರು.

ಅಕಾಡೆಮಿಯ ಅಧ್ಯಕ್ಷ ಸಿ.ಎಂ. ನರೇಂದ್ರಕುಮಾರ್, ನಿರ್ದೇಶಕರಾದ ಮಮತಾ ನರೇಂದ್ರಕುಮಾರ್, ರುದ್ರಮ್ಮ ಜ್ಯೋತಿ, ನೇತ್ರಾವತಿ ಇತರರಿದ್ದರು.

ಶ್ರೀ ಗುರುಕೃಪಾ ಸಂಗೀತ ಪಾಠಶಾಲೆಯ ಮಕ್ಕಳಿಂದ ಭಕ್ತಿ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ಚಿನ್ಮಯ್ ತಬಲಾ ಸಾಥ್ ನೀಡಿದರು. ತ್ರಿವೇಣಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net