ಬಸವಣ್ಣನ ವಚನಗಳು ಸದಾ ಪ್ರಸ್ತುತ

New Mahesh T new
Published on

ಹುಬ್ಬಳ್ಳಿ : ಬಸವ ಜಯಂತಿ ಅಂಗವಾಗಿ ಇಲ್ಲಿನ ಅರವಿಂದ ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಶಾಸಕ ಮಹೇಶ ಟೆಂಗಿನಕಾಯಿ ಅವರು ಜಗಜ್ಯೋತಿ ಬಸವಣ್ಣ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಹಾಗೂ ಶಂಕರಾಚಾರ್ಯರ ಜಯಂತಿ ಆಚರಿಸಲಾಯಿತು.

ನಂತರ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ, ವಿಶ್ವಗುರು ಬಸವಣ್ಣನವರು ದೇಶದ ಏಕತೆಗೆ ವಚನಗಳನ್ನು ಬರೆದು ಪುಸ್ತಕಗಳ ಮೂಲಕ ಜಗತ್ತಿಗೆ ಸಂದೇಶ ಸಾರಿದವರು. ಅವರ ವಚನಗಳು ಸದಾ ಪ್ರಸ್ತುತ. ಅವರ ನಡೆ, ನುಡಿಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ರವಿ ನಾಯ್ಕ , ತೋಟಪ್ಪ ನಿಡಗುಂದಿ, ಪ್ರಶಾಂತ ಹಾವಣಗಿ, ಮಂಜುನಾಥ ಬಿಜವಾಡ, ಪ್ರವೀಣ ಕುಬಸದ, ಲಿಂಗರಾಜ ಬೆಳಗಟ್ಟಿ, ಮುರುಗೇಶ ಹೊರಡಿ, ಅಕ್ಕಮ್ಮ ಹೆಗಡೆ, ವಿಜಯಾ ಗುಡಗೇರಿ, ಚಂದ್ರು ಮುಸನ್ನವರ, ಮಂಜು ಹಲ್ಯಾಳ, ಮುತ್ತಣ್ಣ ಹೆಬ್ಬಳ್ಳಿ ಕಿಶನ್ ಬಿಲಾನ ಡಿ ರಘು ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net