

ಅಂಕೋಲಾ: ಬಸವಣ್ಣನವರು 12ನೇ ಶತಮಾನದಲ್ಲಿ ತೋರಿದ ಸಾಮಾಜಿಕ ಬದಲಾವಣೆಯ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ. ಬುದ್ಧ, ಮಹಾವೀರ, ಅಂಬೇಡ್ಕರ್ ಮುಂತಾದ ಮಹಾನ್ ವ್ಯಕ್ತಿತ್ವಗಳ ಅನಾವರಣಕ್ಕೆ ಪರೋಕ್ಷವಾಗಿ ಪ್ರೇರಣೆಯಾಗಿವೆ ಎಂದು ಬರಹಗಾರ ರಂಜಾನ್ ದರ್ಗಾ ಹೇಳಿದರು.
ಅಂಕೋಲಾದ ಅಂಬಾರಕೊಡ ಪ್ರಕಾಶನದ ರಾಘವೇಂದ್ರ ಪರಿಮಳದಂಗಳದಲ್ಲಿ ವಿಷ್ಣು ನಾಯ್ಕ ಹಾಗೂ ಕವಿತಾ ನಾಯ್ಕ ಅವರ ನೆನಪಿನ ಕಾರ್ಯಕ್ರಮದಲ್ಲಿ ಸಾಹಿತಿ ವಿಷ್ಣು ನಾಯ್ಕರೊಂದಿಗಿನ ಒಡನಾಟ ಸ್ಮರಿಸಿದರು.
ಹಿರಿಯ ಸಾಹಿತಿ ಪ್ರೇಮಾ ಟಿ.ಎಂ.ಆರ್., ಅಧ್ಯಕ್ಷತೆ ವಹಿಸಿದ್ದ ಸಿಂಡಿಕೇಟ್ ಬ್ಯಾಂಕ್ ವಿಶ್ರಾಂತ ನಿರ್ದೇಶಕ ಡಿ. ರಾಮಪ್ಪ ಹಾಗೂ ಕಸಾಪ ತಾಲೂಕಾಧ್ಯಕ್ಷ ಗೋಪಾಲಕೃಷ್ಣ ನಾಯಕ ಮಾತನಾಡಿದರು.
ಉಪನ್ಯಾಸಕ ಉಮೇಶ್ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಸಾಹಿತಿ ರಮಾನಂದ ನಾಯಕ, ಶಾಂತರಾಮ ನಾಯಕ, ಕೃಷ್ಣ ನಾಯಕ ಹಿಚ್ಕಡ, ಮೋಹನ ಹಬ್ಬು, ಆರ್.ಜಿ. ಗುಂದಿ, ನಾಗೇಂದ್ರ ನಾಯಕ, ವಿಷ್ಣು ಗಾಂವಕರ, ಮಹಾಂತೇಶ ರೇವಡಿ ಇತರರಿದ್ದರು.