ಬಸವಣ್ಣನವರ ಆದರ್ಶ ಇಂದಿಗೂ ಪ್ರಸ್ತುತ

HKR BASAVA
Published on

ಹಿರೇಕೆರೂರ: ವಿಶ್ವಗುರು ಬಸವಣ್ಣನವರ ಕ್ರಾಂತಿಕಾರಿ ಆಡಳಿತ ಅವಧಿಯ ನಡವಳಿಕೆಗಳು ಪ್ರಸ್ತುತ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಗೆ ಬಹುದೊಡ್ಡ ಮಾದರಿಯಾಗಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ಬಸವೇಶ್ವರ ಜಯಂತಿ ನಿಮಿತ್ತ ಪಟ್ಟಣದ ಪೇಟೆ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಮದ್ವೀರಶೈವ ಸಮಾಜ ಹಾಗೂ ಅಕ್ಕನ ಬಳಗದ ವತಿಯಿಂದ ಬುಧವಾರ ಆಯೋಜಿಸಿದ್ದ ಬಸವೇಶ್ವರ ಮೂರ್ತಿ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಬಸವಣ್ಣನವರ ಆದರ್ಶ, ಮಾರ್ಗದರ್ಶನಗಳು ಪ್ರತಿಯೊಂದು ಸಮುದಾಯಕ್ಕೆ ಅತ್ಯಂತ ಪೂರಕವಾಗಿವೆ ಎಂದರು.

ತಹಸೀಲ್ದಾರ್ ಎಚ್. ಪ್ರಭಾಕರಗೌಡ ಮಾತನಾಡಿದರು. ಮದ್ವೀರಶೈವ ಸಮಾಜದ ಅಧ್ಯಕ್ಷ ವಿರೂಪಾಕ್ಷಪ್ಪ ಹಂಪಾಳಿ ಅಧ್ಯಕ್ಷತೆ ವಹಿಸಿದ್ದರು. ಪಪಂ ಅಧ್ಯಕ್ಷೆ ಸುಧಾ ಚಿಂದಿ, ಆರ್.ಬಿ. ಹಂಜಿ, ಇಂದುಧರ ಹಿರೇಮಠ, ಈರಣ್ಣ ಹಳ್ಳೂರ, ಚನ್ನವೀರ ಕುಬಸದ, ಕಂಠಾಧರ ಅಂಗಡಿ, ಸಿದ್ದಲಿಂಗೇಶ ಶೆಟ್ಟರ, ಮಹೇಶ ಅಸುಂಡಿ, ರಾಜು ತಿಪ್ಪಶೆಟ್ಟಿ, ರುದ್ರಪ್ಪ ಶೆಟ್ಟರ, ಇಂದುಧರ ಹಳಕಟ್ಟಿ, ಬಾಬು ಅಣಗೊಂಡರ, ಶಿವಯೋಗಿ ಕಾಯಕದ, ತಾಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘ, ಸಮಾಜದ ಅಧ್ಯಕ್ಷ ಬಾಬು ಬಂಚಿನ, ಅಕ್ಕನ ಬಳಗದ ಅಧ್ಯಕ್ಷೆ ಶಶಿಕಲಾ ಹಲವಾಗಿಲ, ಶಶಿಕಲಾ ಬೇತೂರ, ಶಶಿಕಲಾ ಕಾಯಕದ, ಕವಿತಾ ಕಲ್ಯಾಣಿ, ಆಶಾ ಕಲ್ಯಾಣಿ, ತಾಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ, ಮುಖಂಡರಾದ ಮಂಜುನಾಥ ತಂಬಾಕದ, ಹರೀಶ ಕಲಾಲ, ಚಂದ್ರಪ್ಪ ಕಲ್ಯಾಣಿ, ಬಸವಕುಮಾರಯ್ಯ ಮಳಲಿಮಠ, ಹಿರಣ್ಣಯ್ಯ ಹಿರೇಮಠ, ಬಸಮ್ಮ ಅಬಲೂರ ಹಾಗೂ ಸಮಾಜದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net