

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಮಾನತೆ ಮತ್ತು ಸ್ವಾತಂತ್ರ್ಯದ ಪ್ರತಿಕವಾಗಿ ಶರಣ ಸಂಸತಿಯನ್ನು ಬಸವಣ್ಣನವರು ಬಹಳ ಬಲವಾಗಿ ಪ್ರತಿಪಾದಿಸಿದ್ದರು ಎಂದು ಡಾ.ಎಂ.ಎಂ.ಕಲಬುಗಿರ್ಯ ರಾಷ್ಟ್ರೀಯ ಪ್ರತಿಷ್ಠಾನ ಅಧ್ಯಕ್ಷ ಡಾ. ವೀರಣ್ಣ ರಾಜೂರ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿಶ್ವ ವಿದ್ಯಾಲಯದ ಬಸವೇಶ್ವರ ಪೀಠವು ಬಸವೇಶ್ವರ ಜಯಂತಿ ನಿಮಿತ್ತ ಕವಿವಿ ಸುವರ್ಣ ಮಹೋತ್ಸವ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸಾಂಸತಿಕ ನಾಯಕ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಶರಣ ತತ್ವಗಳನ್ನು ಹೊಸ ರೀತಿಯಲ್ಲಿ ವ್ಯಾಖ್ಯಾನ ಮಾಡುವುದು ಅವಶ್ಯಕತೆ ಇದೆ. ಬಸವಣ್ಣವರ ವಚನಗಳು ಸಂವಿಧಾನವಾಗಿದೆ. ಕೆಳಸ್ತರದ ಜನರನ್ನು ಒಗ್ಗೂಡಿಸಿಕೊಂಡು ಅನುಭವ ಮಂಟಪ ರೂಪಿಸಿದ್ದಕ್ಕಾಗಿ ಅವರೊಬ್ಬ ವಿಶ್ವ ಸಾಂಸತಿಕ ನಾಯಕರಾಗಿದ್ದಾರೆ ಎಂದರು.
ಡಾ. ನಿಜಲಿಂಗಪ್ಪ ಮಟ್ಟಿಹಾಳ ಮಾತನಾಡಿ, ಬಸವಣ್ಣನವರು ನುಡಿದಂತೆ ನಡೆದಿದ್ದಾರೆ. ಬಸವೇಶ್ವರರು ಅನುಭವ ಮಂಟಪದ ಮೂಲಕ ಶರಣ ಸಂಸತಿಯನ್ನು ನಾಡಿಗೆ ಪರಿಚಯಿಸಿದರು. ಮಹಿಳೆಯರನ್ನು ಒಳಗೊಂಡಂತೆ ಎಲ್ಲ ಸ್ತರದ ಸಮುದಾಯಗಳಿಗೆ ಹೊಸ ದಿಕ್ಕನ್ನು ಬಸವಣ್ಣನವರು ತೋರಿಸಿದ್ದಾರೆ ಎಂದರು.
ಡಾ.ಎ.ಚೆನ್ನಪ್ಪ ಅಧ್ಯತೆ ವಹಿಸಿದ್ದರು. ಕವಿವಿ ಕುಲಪತಿ ಪ್ರೊ.ಕೆ.ಬಿ.ಗುಡಸಿ, ಪ್ರೊ.ಸಿ. ಕೃಷ್ಣಮೂತಿರ್, ಬಸವ ಅನುಯಾಯಿಗಳು, ಸಿಂಡಿಕೇಟ್ ಸದಸ್ಯರು, ಪ್ರಾಧ್ಯಾಪಕರು, ಸಂಶೋಧಕರು, ಇತರರು ಇದ್ದರು.
ಕವಿವಿ ಬಸವೇಶ್ವರ ಪೀಠದ ಸಂಯೋಜಕ ಡಾ. ಸಿ.ಎಂ.ಕುಂದಗೋಳ ಪ್ರಸ್ತಾವಿಕವಾಗಿ ಮಾತನಾಡಿದರು.