ಸಮಾನತೆ ಸಾರಿದ ಬಸವಣ್ಣ

14M.D.R.4
Published on

ಮಂಡ್ಯ : ಮದ್ದೂರು ಪಟ್ಟಣದ ಶ್ರೀ ಜಗಜ್ಯೋತಿ ಬಸವೇಶ್ವರ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಮಂಗಳವಾರ ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.


ಸಂಘದ ಅಧ್ಯಕ್ಷ ಎಸ್.ಎಂ.ಗಂಗಾಧರ ಮಾತನಾಡಿ, ಸಾಮಾಜಿಕ ಮೌಢ್ಯಗಳನ್ನು ಧಿಕ್ಕರಿಸಿ, ಸಮಾನತೆಯ ಬೀಜ ಬಿತ್ತಿದ ಮಾನವತಾವಾದಿ ಬಸವೇಶ್ವರರು. 12ನೇ ಶತಮಾನದಲ್ಲಿ ಶಿಕ್ಷಣದ ಕೊರತೆ ಇದ್ದ ಕಾಲದಲ್ಲಿ ಸಾಮಾಜಿಕ, ಮಾನವೀಯ ಮೌಲ್ಯಗಳ ಪಾಠ ಮಾಡಿದ ಬಸವಣ್ಣನವರು ವಚನಗಳ ಮೂಲಕ ಸರ್ವರನ್ನು ತಲುಪುವ ಪ್ರಯತ್ನ ಮಾಡಿದ್ದು ಅವರ ಹಿರಿಮೆಯಾಗಿದೆ ಎಂದು ಬಣ್ಣಿಸಿದರು.


ಜಾತಿ ವ್ಯವಸ್ಥೆಯನ್ನು ಹೋಗಲಾಡಿಸುವ ಸಲುವಾಗಿ, ಸಮ ಸಮಾಜವನ್ನು ನಿರ್ಮಿಸುವುದಕ್ಕಾಗಿ 12ನೇ ಶತಮಾನದಲ್ಲಿ ಬಸವಣ್ಣನವರು ವಚನಗಳ ಮೂಲಕ ಸಮಾಜವನ್ನು ತಿದ್ದುವ ಕಾಯಕವನ್ನು ಮಾಡಿದ್ದಾರೆ. ಅವರ ಆದರ್ಶ ಗುಣಗಳನ್ನು ಹಾಗೂ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಸುಗಮವಾಗುತ್ತದೆ ಎಂದು ಸಲಹೆ ನೀಡಿದರು.


ಇದೇ ವೇಳೆ ಬಸವಣ್ಣನವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ಪ್ರಸಾದ ವಿತರಣೆ ಮಾಡಲಾಯಿತು.
ಸಂಘದ ಉಪಾಧ್ಯಕ್ಷ ಎಂ.ವೀರಭದ್ರಸ್ವಾಮಿ, ನಿರ್ದೇಶಕರಾದ ಬಿ.ವಿ.ಮಂಜುನಾಥ್, ತೋಂಟದಾರ್ಯ, ಎಚ್.ಬಿ.ಸ್ವಾಮಿ, ಪಿ.ಬಿ.ಮಹದೇವಸ್ವಾಮಿ, ಎಸ್.ಸಿದ್ದಮ್ಮ, ಪಿ.ತ್ರಿವೇಣಿ, ಸಿ.ಜಿ.ಗೌರಿಶಂಕರ್, ಬಸವರಾಜು, ಪಿ.ರಾಜಶೇಖರ್, ಎಂ.ಸಿದ್ದಲಿಂಗಪ್ರಸಾದ್, ವೈ.ಬಿ.ಶ್ರೀಕಂಠಸ್ವಾಮಿ, ಕಾರ್ಯದರ್ಶಿ ರಾಜಮಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net