ಬಸವಣ್ಣ ಕ್ರಾಂತಿಕಾರಿ ನಾಯಕ

28 gvt 03
ಗಂಗಾವತಿ ಕೊಟ್ಟೂರು ಬಸವೇಶ್ವರ ದೇವಾಲಯ ಆವರಣದಲ್ಲಿ ಬಸವ ಜಯಂತಿ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಬಸವ ಜಯಂತಿ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಶಂಕರಗೌಡ ಹೊಸಳ್ಳಿ, ಸಮಿತಿ ಮಹಿಳಾ ಘಟಕದ ಮುಖ್ಯಸ್ಥೆ ಲಲಿತಾರಾಣಿ ರಾಯುಲು ಇತರರಿದ್ದರು.
Published on

ಗಂಗಾವತಿ: ಸಾಂಸ್ಕೃತಿಕ ನಾಯಕ ಬಸವೇಶ್ವರ ಜಯಂತಿ ನಿಮಿತ್ತ ಏ.30ರಿಂದ ಮೇ 15ರವರೆಗೆ ಆಧ್ಯಾತ್ಮಿಕ ಪ್ರವಚನ ಮತ್ತು ಸಾಮೂಹಿಕ ಭಜನೆ ಹಮ್ಮಿಕೊಳ್ಳಲಾಗಿದೆ ಎಂದು ಬಸವ ಜಯಂತಿ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಶಂಕರಗೌಡ ಹೊಸಳ್ಳಿ ಹೇಳಿದರು.

ನಗರದ ಕೊಟ್ಟೂರುಬಸವೇಶ್ವರ ದೇವಾಲಯ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಶ್ವಗುರು ಬಸವಣ್ಣ ಕ್ರಾಂತಿಕಾರಿ ನಾಯಕ ಎಂದು ಜಗತ್ತೇ ಪರಿಗಣಿಸಿದ್ದು, 12ನೇ ಶತಮಾನದಲ್ಲಿನ ಅನುಭವ ಮಂಟಪ ಪರಿಕಲ್ಪನೆ ಸಾರ್ವಕಾಲಿಕ ಮಾನ್ಯತೆ ಪಡೆದಿದೆ. ಬಸವ ಜಯಂತಿಯನ್ನು ವಿವಿಧ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದು, ನಿತ್ಯ ಬೆಳಗ್ಗೆ 5.30ರಿಂದ 6.30ರವರೆಗೆ ಹಿಮಾಲಯನ್ ಧ್ಯಾನಯೋಗ ನಡೆಯಲಿದೆ ಎಂದರು.

ಸಮಿತಿ ಮಹಿಳಾ ಘಟಕದ ಮುಖ್ಯಸ್ಥೆ ಲಲಿತಾರಾಣಿ ರಾಯುಲು ಮಾತನಾಡಿ, ವರ್ಣ, ಜಾತಿ, ವರ್ಗ ಭೇದ, ಕಂದಾಚಾರ, ಮೂಢನಂಬಿಕೆಗಳ ವಿರುದ್ಧ ಹೋರಾಡಿದ ಶ್ರೇಷ್ಠನಾಯಕ ಬಸವಣ್ಣ ಅವರ ವಚನಗಳನ್ನು ಯುವ ಪೀಳಿಗೆಗೆ ಪರಿಚಯಿಸಲಾಗುತ್ತಿದ್ದು, ಆರೋಗ್ಯ, ಮಾನಸಿಕ, ಆಧ್ಯಾತ್ಮಕ ಬೆಳವಣಿಗೆಗೆ ಪೂರಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ನಯೋಪ್ರಾ ಮಾಜಿ ಅಧ್ಯಕ್ಷ ಮಹಾಲಿಂಗಪ್ಪ ಬನ್ನಿಕೊಪ್ಪ ಮಾತನಾಡಿ, ಏ.30ರಂದು ಬಸವ ಜಯಂತ್ಯುತ್ಸವ ಹಿನ್ನೆಲೆಯಲ್ಲಿ ತಾಲೂಕಾಡಳಿತ ಸಹಯೋಗದಲ್ಲಿ ಭಾವಚಿತ್ರ ಮೆರವಣಿಗೆ ಮತ್ತು ಬಾಲಕಿಯರ ಸ.ಹಿ.ಪ್ರಾ.ಶಾಲೆಯಲ್ಲಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಸಮಿತಿ ಸಂಚಾಲಕ ಎ.ಕೆ.ಮಹೇಶಕುಮಾರ, ಪದಾಧಿಕಾರಿಗಳಾದ ಗಾಳಿ ರುದ್ರಪ್ಪ, ಕೆ.ಬಸವರಾಜ, ದಿಲೀಪ್ ಕುಮಾರ ವಂದಾಲ್, ನಿಜಲಿಂಗಪ್ಪಮೆಣಸಗಿ, ಜಗದೀಶಸ್ವಾಮಿ ಎಂ.ಹಿರೇಮಠ, ಶಾಂತವೀರಯ್ಯ ಗಂಧದಮಠ, ಶ್ರೀಶೈಲ ಪಟ್ಟಣಶೆಟ್ಟರ್, ಡಾ.ಶಿವಕುಮಾರ ಮಾಲಿ ಪಾಟೀಲ್, ರಾಚಪ್ಪ ಸಿದ್ದಾಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net