ಜಾತಿಯ ಮೌಢ್ಯತೆ ತೊಡೆದುಹಾಕಿದ ಬಸವಣ್ಣ

tdl 9 basava
ತೇರದಾಳದ ಬಸ್ ನಿಲ್ದಾಣ ಬಳಿ ನೂತನವಾಗಿ ನಿರ್ಮಿಸಲಾದ ಬಸವೇಶ್ವರ ಪುತ್ಥಳಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಗದಗ-ಡಂಬಳ ತೋಂಟದಾರ್ಯ ಸಂಸ್ಥಾನಮಠದ ಜಗದ್ಗುರು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ, ಶಾಸಕ ಸಿದ್ದು ಸವದಿ, ಪುರಸಭೆ ಅಧ್ಯಕ್ಷೆ ಶಿಲ್ಪಾ ರೋಡಕರ ಇತರರಿದ್ದರು.
Published on

ತೇರದಾಳ: ಸಮಾಜದಲ್ಲಿರುವ ಜಾತಿ ಮೌಢ್ಯತೆ ತೊಡೆದುಹಾಕಿ ಸಮಾನತೆಯತ್ತ ಸಾಗಿದ ಕ್ರಾಂತಿಕಾರಿ ಅಣ್ಣಬಸವಣ್ಣನವರ ಪುತ್ಥಳಿ ನಿರ್ಮಿಸಿರುವುದು ಉತ್ತಮ ಕಾರ್ಯವಾಗಿದೆ ಎಂದು ಗದಗ-ಡಂಬಳ ತೋಂಟದಾರ್ಯ ಸಂಸ್ಥಾನಮಠದ ಜಗದ್ಗುರು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ಕ್ಷೇತ್ರಾಧಿಪತಿ ಅಲ್ಲಮಪ್ರಭುದೇವರ ದೇವಸ್ಥಾನ ಲೋಕಾರ್ಪಣೆ ಸಂದರ್ಭದಲ್ಲೇ ಸ್ಥಳೀಯ ಬಸ್ ನಿಲ್ದಾಣ ಬಳಿಯಲ್ಲಿ ನೂತನವಾಗಿ ಸಿದ್ಧಗೊಂಡ ಬಸವೇಶ್ವರ ಕಂಚಿನ ಪುತ್ಥಳಿಯನ್ನು ಶನಿವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಧರ್ಮ ಜಾಗೃತಿ ಮೂಡಿಸುವ ಮೂಲಕ ಮಾನವ ಸಮಾಜದ ಜಾತಿ ಹೆಸರಿನ ಅಂಧಕಾರ ತೆಗೆದುಹಾಕಿ ಶರಣತತ್ವದ ಮೂಲಕ ಪ್ರತಿಯೊಬ್ಬರಿಗೂ ಲಿಂಗ, ದಾಸೋಹಗಳನ್ನು ಕೊಡಮಾಡಿದ ಮಹಾನ್ ಶಕ್ತಿ ಬಸವಣ್ಣ ಎಂದು ಬಣ್ಣಿಸಿದರು.

ಹಂದಿಗುಂದದ ಶಿವಾನಂದ ಶ್ರೀ, ಡಾ. ಮಹಾಂತಪ್ರಭು ಶ್ರೀ, ಚಿಮ್ಮಡ ಪ್ರಭು ಶ್ರೀ, ಶಾಸಕ ಸಿದ್ದು ಸವದಿ, ಪುರಸಭೆ ಅಧ್ಯಕ್ಷೆ ಶಿಲ್ಪಾ ಗೌತಮ ರೋಡಕರ, ಉಪಾಧ್ಯಕ್ಷ ನಸರಿನ್‌ಬಾನು ನಗಾರ್ಜಿ, ನೀರಾವರಿ ಇಲಾಖೆ ಅಧಿಕಾರಿಗಳು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net