ಬಸವಣ್ಣ ಕಾಯಕ ತತ್ವ ಅಳವಡಿಸಿಕೊಳ್ಳಿ

25 SANDOOR 01
ಸಂಡೂರು ರೋಟರಿ ಪ್ರೌಢಶಾಲೆಯಲ್ಲಿ ಕಸಾಪ ವತಿಯಿಂದ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕಸಾಪ ಅಧ್ಯಕ್ಷ ಬಿ.ನಾಗನಗೌಡ, ಮುಖ್ಯಶಿಕ್ಷಕಿ ಜೆ.ಸರಸ್ವತಿ, ಚಿತ್ರಿಕಿ ಸುಮಂಗಳಮ್ಮ, ರೋಟರಿ ಅಧ್ಯಕ್ಷ ಟಿ.ಜಿ.ಸುರೇಶ್ ಗೌಡ ಇದ್ದರು.
Published on

ಸಂಡೂರು: ಬಸವಣ್ಣ ಮೂಢನಂಬಿಕೆ, ಕಂದಾಚಾರಗಳನ್ನು ವಿರೋಧಿಸಿದ್ದಲ್ಲದೆ 12ನೇ ಶತಮಾನದಲ್ಲಿ ಮಹಿಳೆಯರಿಗೂ ಸಮಾನ ಹಕ್ಕು ಕಲ್ಪಿಸಿದರು ಎಂದು ಕಸಾಪ ಅಧ್ಯಕ್ಷ ಬಿ.ನಾಗನಗೌಡ ಹೇಳಿದರು.

ಪಟ್ಟಣದ ರೋಟರಿ ಪ್ರೌಢಶಾಲೆಯಲ್ಲಿ ತಾಲೂಕು ಕಸಾಪ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕೆ.ಎಸ್.ಅನ್ನಪೂರ್ಣಮ್ಮ ಸಂಗಪ್ಪ ದತ್ತಿ ದಾನಿಗಳಾದ ಮರಿಬಸಮ್ಮ ಚಿತ್ರಿಕಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜನಿವಾರ ಬಿಸಾಡಿ ಬಸವನಬಾಗೇವಾಡಿಯಿಂದ ಕಲ್ಯಾಣಕ್ಕೆ ಬಂದು ಕ್ರಾಂತಿ ಮಾಡಿದರು. ಕಾಯಕ ಯೋಗಿ, ಭಕ್ತಿ ಭಂಡಾರಿಯಾಗಿ, ವಿಶ್ವಮಾನವನಾಗಿ ಅವರ ಸತ್ಯ ಶುದ್ಧ ಜೀವನ ಹಾಗೂ ಕಾಯಕ, ದಾಸೋಹ ತತ್ವ ಸಾರಿದರು. ಸಮಾನತೆಯ ಸಂದೇಶ ಸಾರಿದರು ಎಂದರು. ರೋಟರಿ ಕ್ಲಬ್ ಅಧ್ಯಕ್ಷ ಟಿ.ಜಿ. ಸುರೇಶ ಗೌಡ ಮಾತನಾಡಿ, ಶರಣರ ತತ್ವಗಳನ್ನು ಮಕ್ಕಳಿಗೆ ತಿಳಿಸಿ ಸರಿದಾರಿಯಲ್ಲಿ ಸಾಗುವಂತೆ ಮಾಡಬೇಕಿದೆ. ಸತ್ಯ, ನ್ಯಾಯ, ಸಹಬಾಳ್ವೆ ತಿಳಿಸಬೇಕು ಎಂದು ಹೇಳಿದರು.

ದತ್ತಿ ದಾನಿ ಚಿತ್ರಿಕಿ ಸುಮಂಗಳಮ್ಮ, ಪ್ರಮುಖರಾದ ಜಿ.ವೀರೇಶ, ವೆಂಕಟಸುಬ್ಬಯ್ಯ, ಎ.ಎಂ.ಶಿವಮೂರ್ತಿ ಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net