ರಾಜ್ಯ ಸರ್ಕಾರದಿಂದ ಬಸವಣ್ಣಗೆ ಮನ್ನಣೆ

h17-lingayat
Published on

ಹುಬ್ಬಳ್ಳಿ: ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರವನ್ನು ನವನಗರದ ಅಖಿಲ ಭಾರತ ಲಿಂಗಾಯತ ಮಹಾ ಸಭಾ ಕಾರ್ಯಲಯದಲ್ಲಿ ಶನಿವಾರ ಅನಾವರಣಗೊಳಿ ಸಿಹಿ ಹಂಚಲಾಯಿತು.
ಅಧ್ಯಕ್ಷ ಈರಪ್ಪ ಎಮ್ಮಿ ಮಾತನಾಡಿ, ಸಮಪಾಲು-ಸಮಬಾಳು ನೀಡಿದ ಬಸವಣ್ಣನವರಿಗೆ ರಾಜ್ಯ ಸರ್ಕಾರ ದೊಡ್ಡ ಮನ್ನಣೆ ನೀಡಿದೆ. ಸರ್ವಸಾಮಾನ್ಯರನ್ನು ಸೇರಿಸಿಕೊಂಡು ಅನುಭವ ಮಂಟಪದಲ್ಲಿ ಜ್ಞಾನದಾಸೋಹ, ಅನ್ನದಾಸೋಹ ನಡೆಸಿದರು. ಕಾಯಕವೇ ಕೈಲಾಸವೆಂದು ಸಾರಿದರು ಬಸವಣ್ಣ ಎಂದರು.
ನಿವೃತ್ತ ಎಸಿಪಿ ಎಂ.ಕೆ. ಸೊಲಭೇಶ್ವರಪ್ಪ ಮಾತನಾಡಿದರು. ಪ್ರಮುಖರಾದ ಸುರೇಶ ದ್ಯಾಮನ್ನವರ, ಓಂ ಸಂಗಮೇಶ್ವರ ಐಹೊಳಿ, ಅನಸೂಯಾ ಅರಕೇರಿ, ರಿಯಾಜ್ ನದಾಫ್, ಗೀತಾ ಹೊಸಮನಿ, ಸಾವಿತ್ರಿ ಪತ್ಯೆಣ್ಣವರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net