

ಬಾಗಲಕೋಟೆ: ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಗರದ ಬಸವೇಶ್ವರ ವೃತ್ತದಲ್ಲಿನ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಾಣೆ ಮಾಡುವ ಮೂಲಕ ಜಯಂತಿ ಆಚರಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ನಾಗರಾಜ ಹದ್ಲಿ ಮಾತನಾಡಿ, ವಿಶ್ವ ಕಂಡ ಮಹಾನ್ ಮಾನವತಾವಾದಿ, ಬಸವಣ್ಣದಾರ್ಶನಿಕ, ಸಾಮಾಜಿಕ ಕ್ರಾಂತಿಕಾರ, ಸ್ತ್ರೀ ಸಮಾನತೆಯ ಪ್ರತಿಪಾದಕ, ಜಾತ್ಯತೀತ ಮಾನವ ಧರ್ಮದ ಸ್ಥಾಪಕರಾಗಿದ್ದಾರೆ. ಕಾಯಕ ನಿಷ್ಠೆ ಎಂದಿಗೂ ಮರೆಯಲಾಗದು. ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ ಎಂದರು.
ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಕ್ಷಿತಾ ಈಟಿ ಮಾತನಾಡಿ, ದಯವಿಲ್ಲದ ಧರ್ಮವದಾವುದಯ್ಯ, ದಯವೇ ಧರ್ಮದ ಮೂಲವಯ್ಯ ಎನ್ನುತ್ತಾ ಸಮಾನತೆ ಸಾರಿದ ಶ್ರೇಷ್ಠ ಶರಣರು. ಕ್ರಾಂತಿಯೋಗಿ, ವಿಶ್ವಗುರು ಬಸವಣ್ಣನವರ ತತ್ವಾದರ್ಶಗಳು ನಮಗೆಲ್ಲ ದಾರಿದೀಪವಾಗಿವೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಮೇಟಿ, ಮುತ್ತು ಜೋಳದ, ಸಿದ್ದಣ್ಣ ಗೋಡಿ, ಮಲ್ಲಿಕಾರ್ಜುನ ಶಿರೂರ, ವಿಜಯ ಕಮತಗಿ, ಇಮಾಮಸಾಬ್ ಬಳಬಟ್ಟಿ, ಶ್ರೀಧರ ನೀಲನಾಯಕ, ಶಂಕರ ನಾಯಕ, ಶಿವಾನಂದ ಮಲ್ಲಾಪುರ ವಿಜಯ ಮುಳ್ಳೂರ, ಸಂದೀಪ ಬೆಳಗಲ್ಲ, ಕೇಶವ ಕುಲಕರ್ಣಿ, ಅರವಿಂದ ನಾವಲಗಿ, ಪ್ರಭು ಇಂಡಿ ಇತರರಿದ್ದರು.