ಮಾನವೀಯ ವೌಲ್ಯಗಳ ಅರಿವು ನೀಡಿದ ಬಸವಣ್ಣ

12-05-Shiva-3
ರಾಯಚೂರಿನ ಬಸವ ಕೇಂದ್ರದಲ್ಲಿ ಬಸವ ಜಯಂತಿ ಅಂಗವಾಗಿ ಶನಿವಾರ ಸಂಜೆ ಏರ್ಪಡಿಸಿದ್ದ ಚಿಂತನಾ ಗೋಷ್ಠಿಯಲ್ಲಿ ಸಿರುಗುಪ್ಪದ ಬಸವ ಬಳಗ ಟ್ರಸ್ಟ್‌ನ ಮುಖ್ಯಸ್ಥ ಬಸವರಾಜಪ್ಪ ವೆಂಕಟಾಪುರ ಮಾತನಾಡಿದರು. ಬಸವ ಕೇಂದ್ರದ ಅಧ್ಯಕ್ಷ ರಾಚನಗೌಡ ಕೋಳೂರು, ಮುಖಂಡರಾಧ ಎನ್.ಗಿರಿಜಾಶಂಕರ, ನಾಗನಗೌಡ ಹರವಿ, ಲಕ್ಷ್ಮಿಬಾಯಿ ಸಜ್ಜನ್, ಶಿವಕುಮಾರ ಮಾಟೂರ್, ಚನ್ನಬಸವ, ಡಾ.ಪರಮೇಶ್ವರಪ್ಪ ಸಾಲಿಮಠ, ಮಹಾದೇವಪ್ಪ ಏಗನೂರು ಇದ್ದರು.
Published on

ರಾಯಚೂರು: ಜಗತ್ತಿಗೆ ಸಮಾನತೆಯ ಬೆಳಕನ್ನು ನೀಡುವುದರ ಜತೆಗೆ ಮಾನವೀಯ ವೌಲ್ಯಗಳ ಅರಿವು ನೀಡಿದ ಬಸವಣ್ಣ ದೇವರ ನಿರಾಕಾರ ಮತ್ತು ಸಾಕಾರ ಸ್ವರೂಪವನ್ನು ಪ್ರತ್ಯಕ್ಷವಾಗಿ ಪ್ರಾಮಾಣಿಕರಿಸಿ ತೋರಿಸಿದ್ದಾರೆ ಎಂದು ಸಿರುಗುಪ್ಪದ ಬಸವ ಬಳಗ ಟ್ರಸ್ಟ್‌ನ ಮುಖ್ಯಸ್ಥ ಬಸವರಾಜಪ್ಪ ವೆಂಕಟಾಪುರ ತಿಳಿಸಿದರು.
ಸ್ಥಳೀಯ ಬಸವ ಕೇಂದ್ರದಲ್ಲಿ ಬಸವ ಜಯಂತಿ ಅಂಗವಾಗಿ ಶನಿವಾರ ಸಂಜೆ ಏರ್ಪಡಿಸಿದ್ದ ಚಿಂತನಾಗೋಷ್ಠಿಯಲ್ಲಿ ಮಾತನಾಡಿ, ದೇವರ ಬಗ್ಗೆ, ವೇದ, ಶಾಸ ಪುರಾಣಗಳಲ್ಲಿ ಇರುವ ಗೊಂದಲವನ್ನು ತೆಗೆದು ಸಕಲ ಜೀವಿಗಳ ಅಂತರಂಗದಲ್ಲಿ ದೇವರು ಪ್ರಕಾಶಮಾನವಾಗಿ ಇರುವುದನ್ನು ಬಸವಣ್ಣ ತೋರಿಸಿಕೊಟ್ಟಿದ್ದಾರೆ ಎಂದರು.
ಬಸವ ತತ್ತ್ವವನ್ನು ಅರಿತು ಆಚರಿಸುವ ವ್ಯಕ್ತಿ ಯಾವತ್ತೂ ಜೀವನದಲ್ಲಿ ಕೆಟ್ಟ ವಿಚಾರ, ಅಭ್ಯಾಸ ಮತ್ತು ಕೃತ್ಯಗಳನ್ನು ಮಾಡುವುದಿಲ್ಲ. ಪೋಷಕರು ತಮ್ಮ ಮಕ್ಕಳಿಗೆ ಬಸವಾದಿ ಪ್ರಮಥರ ವಚನಗಳನ್ನು ತಿಳಿಸಿಕೊಟ್ಟು ಸುಸಂಸ್ಕೃತರನ್ನಾಗಿ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಕ್ಕಳಿಂದ ವಚನ ನೃತ್ಯ ಹಾಗೂ ರಾಘವೇಂದ್ರ ಆಶಾಪುರ ತಂಡದಿಂದ ವಚನ ಗಾಯನ ಕಾರ್ಯಕ್ರಮ ಜರುಗಿತು. ಬಸವ ಕೇಂದ್ರದ ಅಧ್ಯಕ್ಷ ರಾಚನಗೌಡ ಕೋಳೂರು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖಂಡರಾಧ ಎನ್.ಗಿರಿಜಾಶಂಕರ, ನಾಗನಗೌಡ ಹರವಿ, ಲಕ್ಷ್ಮಿಬಾಯಿ ಸಜ್ಜನ್, ಶಿವಕುಮಾರ ಮಾಟೂರ್, ಚನ್ನಬಸವ, ಡಾ.ಪರಮೇಶ್ವರಪ್ಪ ಸಾಲಿಮಠ, ಮಹಾದೇವಪ್ಪ ಏಗನೂರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net