

ಗುಳೇದಗುಡ್ಡ: ಸಮಾಜದಲ್ಲಿ ಬೇರೂರಿದ್ದ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು 12ನೇ ಶತಮಾನದಲ್ಲಿ ವಚನಗಳ ಮೂಲಕ ಸಮಾನತೆ ಸಾರಿದ ಕ್ರಾಂತಿ ಪುರುಷ ಬಸವಣ್ಣ. ಕಾಯಕವೇ ಕೈಲಾಸ ಎಂಬ ತತ್ವಬೋಧಿಸಿ, ಸರ್ವಜಾತಿ ಜನಾಂಗಗಳ ಸಮಾನತೆಯ ಕನಸು ಕಂಡು ಕಲ್ಯಾಣದಲ್ಲಿ ಕಟ್ಟಿದ ಅನುಭವ ಮಂಟಪ ಜಗತ್ತಿಗೆ ಸರ್ವಧರ್ಮ ಸಮಾನತೆ ಸಾರುತ್ತಿದೆ ಎಂದು ಸುರೇಶ ರಾಜನಾಳ ಹೇಳಿದರು.
ಪಟ್ಟಣದ ಬಸವ ಕೇಂದ್ರ ವತಿಯಿಂದ ಬುಧವಾರ ಬಸಮ್ಮ ಮಂಗಳಗುಡ್ಡ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬುದ್ಧ, ಬಸವ, ಅಂಬೇಡ್ಕರ್ ಅವರು ಒಂದು ಜಾತಿಗೆ, ಒಂದು ಧರ್ಮಕ್ಕೆ ಸೀಮಿತಲ್ಲ. ಅವರು ಜಗತ್ತಿಗೆ ಕಲ್ಯಾಣ ಬಯಸುವ ಮಹಾನ್ ಮಾನವತಾವಾದಿಗಳು. ಬಸವಣ್ಣನವರ ವಚನಗಳು ನಮಗೆ ಮಾರ್ಗದರ್ಶಕವಾಗಿವೆ ಎಂದರು.
ಪ್ರೊ. ವೈ.ಬಿ. ಗೌಡರ ಮಾತನಾಡಿದರು. ಬಸವ ಜಯಂತಿ ಅಂಗವಾಗಿ ಸಾಮೂಹಿಕ ಸಹಜ ಶಿವಯೋಗ ಕಾರ್ಯಕ್ರಮ ನಡೆಯಿತು.
ಅಕ್ಕಮಹಾದೇವಿ ದೇವಸ್ಥಾನದ ಶರಣಮ್ಮತಾಯಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಬಸವ ಕೇಂದ್ರದ ಗೌರವಾಧ್ಯಕ್ಷ ಎಚ್.ಎಸ್. ಹುಳಿಪಲ್ಲೇದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರೊ. ಸಿದ್ದಲಿಂಗಪ್ಪ ಬರಗುಂಡಿ, ಸಂಜಯ ಬರಗುಂಡಿ, ಶ್ರೀಕಾಂತ ಗಡೇದಗೌಡರ, ಶಿವಾನಂದ ಸಿಂದಗಿ, ಮುರಗೇಶ ಶೇಖಾ, ಬಸವರಾಜ ಬರಗುಂಡಿ, ಮಹಾಲಿಂಗಪ್ಪ ಕರನಂದಿ, ಮೋಹನ ಕರನಂದಿ, ಎಂ.ಪಿ. ನೀಲಕಂಠಮಠ, ಗಣೇಶ ಶೀಲವಂತ, ಬಸವರಾಜ ಗೆದ್ದಲಮರಿ, ಸಂಗಮೇಶ ಯಳಮೇಲಿ, ಮಹಾಂತೇಶ ಸಿಂದಗಿ, ಮಂಜುನಾಥ ನಾಯನೇಗಲಿ, ಶಂಕರ ಸನಪಾ, ಪಾಂಡಪ್ಪ ಕಳಸಾ, ಶ್ರೀದೇವಿ ಶೇಖಾ, ಸುರೇಖಾ ಗೆದ್ದಲಮರಿ, ನಿರ್ಮಲಾ ಬರಗುಂಡಿ, ದಾಕ್ಷಾಯಿಣಿ ಹಿರೇಮಠ, ಕವಿತಾ ಬಂಕಾಪೂರ, ಗಾಯತ್ರಿ ಕಲ್ಯಾಣಿ ಮತ್ತಿತರರು ಇದ್ದರು.