

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ನರೇಂದ್ರ ಗ್ರಾಮದ ಹಿರೇಕೆರೆ ಬಳಿಯ ಗುಡ್ಡದ ಬಸವಣ್ಣನ ಜಾತ್ರಾ ಮಹೋತ್ಸವ ಆ. 19ರಂದು ಜರುಗಲಿದೆ. ಅಂದು ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಅಭಿಷೇಕ, ಇತರ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಸಂಪ್ರದಾಯದಂತೆ ಮಧ್ಯಾಹ್ನ ಹುಚ್ಚಯ್ಯನನ್ನು (ದೇವರ ಸಣ್ಣ ರಥ) ಭಕ್ತರಿಂದ ಎಳೆಯಲಿದ್ದು, ಅನ್ನಸಂತರ್ಪಣೆ ನಡೆಯಲಿದೆ. ಗ್ರಾಮದ ಶ್ರೀ ಶಿವಶಕ್ತಿ ಹವ್ಯಾಸಿ ಯುವಕ ಮಂಡಳ ವತಿಯಿಂದ ಹೆಜ್ಜೆಮೇಳ ಪ್ರದರ್ಶನ, ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನರೇಂದ್ರ ಹಾಗೂ ಸುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.