

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ಅಮ್ಮಿನಬಾವಿ ಗ್ರಾಮದ ಗುಡಿ ಓಣಿಯ ಪ್ಯಾಟಿ ಬಸವಣ್ಣ (ನಂದೀಶ್ವರ) ದೇವರ ವಾಷಿರ್ಕ ಜಾತ್ರಾ ಮಹೋತ್ಸವ ಏ.23 ರಂದು ಜರುಗಲಿದೆ.
ಏ.22 ರಂದು ರಾತ್ರಿ 8 ಗಂಟೆಗೆ ಉಚ್ಛಾಯ ಬಂಡಿ ಉತ್ಸವ ವಿವಿಧ ಜನಪದ ವಾದ್ಯಗಳ ಸಮೇತ ಗ್ರಾಮದ ಪ್ರಮುಖ ಬೀದಿಯಲ್ಲಿ ನಡೆಯಲಿದ್ದು, ಅಂದು ದೇವಾಲಯದಲ್ಲಿ ಅಹೋರಾತ್ರಿ ಭಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಏ.23 ರಂದು ಪ್ರಾತಃಕಾಲ ಬಸವಣ್ಣ (ನಂದೀಶ್ವರ) ದೇವರ ವಿಗ್ರಹಕ್ಕೆ ಏಕಾದಶ ಮಹಾರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ, ಅಲಂಕಾರ ಪೂಜೆ ಹಾಗೂ ಮಹಾಮಂಗಳಾರತಿ ಜರುಗುವುದು. ನಂತರ ಅಪರಾಹ್ನ ದಾಸೋಹ ಸೇವೆಯಲ್ಲಿ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ 4ಗಂಟೆಗೆ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಜಂಗಮರು ರಥವನೇರುತ್ತಿದ್ದಂತೆ ಅಲಂಕೃತ ರಥೋತ್ಸವ ನಂದಿಕೋಲು, ಕರಡಿ ಮಜಲು, ಭಜನೆಗಳ ಸಮೇತ ಆರಂಭಗೊಳ್ಳುವುದು. ದೇವಾಲಯದ ಪ್ರಧಾನ ಅರ್ಚಕ ಬಸವರಾಜ ಪೂಜಾರ ರಥೋತ್ಸವದ ಕೊನೆಗೆ ವರ್ಷದ ಆಗು&ಹೋಗುಗಳ ಬಗೆಗೆ ಹೇಳಿಕೆ ಹೇಳುವರೆಂದು ದೇವಾಲಯದ ಪ್ರಕಟಣೆ ತಿಳಿಸಿದೆ.