

ಬಸವನಬಾಗೇವಾಡಿ: ಮಸಬಿನಾಳ ತಾಂಡಾ ಬಳಿ ಕಳ್ಳಬಟ್ಟಿ ಧ್ವಂಸಗೊಳಿಸಿದ ಬೆನ್ನಲ್ಲೆ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ಕರವೇ (ಪ್ರವೀಣ ಶೆಟ್ಟಿ ಬಣ) ಕಾರ್ಯಕರ್ತರು ವಿವಿಧೆಡೆ ಹೂತಿಟ್ಟ ಕಳ್ಳಬಟ್ಟಿ ಧ್ವಂಸಗೊಳಿಸಿದ್ದಾರೆ.
ಪಿಎಸ್‌ಐ ಎನ್.ಬಿ. ಶಿವೂರ ಹಾಗೂ ಗ್ರಾಪಂ ಅಧ್ಯಕ್ಷ ನಂದಬಸು ಆಸಂಗಿ ಅವರ ಸಮ್ಮುಖದಲ್ಲಿ ಕರವೇ ಗ್ರಾಮ ಘಟಕದ ಅಧ್ಯಕ್ಷ ಶರಣು ಯಾತದ, ಕಾನೂನು ಘಟಕದ ಅಧ್ಯಕ್ಷ ನಾಥು ರಾಠೋಡ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಯುವಕರು ಹತ್ತರಕಿಹಾಳ ರಸ್ತೆ ಪಕ್ಕದ ಜಮೀನುಗಳಲ್ಲಿ ಹಾಗೂ ಅರಣ್ಯ ಇಲಾಖೆಗೆ ಸೇರಿದ ಜಮೀನಿನಲ್ಲಿ ಹೂತಿಟ್ಟಿದ್ದ ನೂರಾರು ಕೊಡ ಕಳ್ಳಬಟ್ಟಿಯನ್ನು ಶುಕ್ರವಾರ ಧ್ವಂಸಗೊಳಿಸಿದರು.
ಕಾರ್ಯಾಚರಣೆಯಲ್ಲಿ ಉಕ್ಕಲಿ ಗ್ರಾಪಂ ಸದಸ್ಯ ಪಾಂಡು ರಾಠೋಡ, ರಾಹುಲ್ ಕಲಗೊಂಡ, ಬಸವರಾಜ ಬಡಿಗೇರ, ಶರಣು ಸಂಗಮದ, ಚಿದು ಬೆಲ್ಲದ, ರಿಯಾಜ್ ಮಕಾನದಾರ್, ಉಲ್ಲಾಸ ರಾಠೋಡ ಮತ್ತಿತರರು ಇದ್ದರು.