ಬಸವನಬಾಗೇವಾಡಿಯಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ

Basavanbagewadi, Pratibha Puraskar, SK Bellubbi, Yallalingeshwar Mutt, Ganiga,
ಬಸವನಬಾಗೇವಾಡಿ ಪಟ್ಟಣದ ಗಣೇಶ ನಗರದ ಯಲ್ಲಾಲಿಂಗೇಶ್ವರ ಮಠದಲ್ಲಿ ಗಾಣಿಗ ಸಮಾಜ ಪ್ರತಿಭಾವಂತ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ಎಸ್.ಕೆ.ಬೆಳ್ಳುಬ್ಬಿ, ಕಲ್ಲಿನಾಥ ದೇವರು, ಕಲ್ಲು ಸೊನ್ನದ, ಸಿದ್ದನಗೌಡ ಪಾಟೀಲ ಇತರರಿದ್ದರು.
Published on

ಬಸವನಬಾಗೇವಾಡಿ: ಸಮಾಜ ನಮಗೇನು ಮಾಡಿತು ಎಂಬುದು ಮುಖ್ಯವಲ್ಲ, ಸಮಾಜಕ್ಕೆ ನಾವು ಏನು ಮಾಡಿದ್ದೇವೆ ಎಂಬುದು ಮುಖ್ಯ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.

ಪಟ್ಟಣದ ಮಸಬಿನಾಳ ರಸ್ತೆಯ ಗಣೇಶ ನಗರದ ಯಲ್ಲಾಲಿಂಗೇಶ್ವರ ಮಠದಲ್ಲಿ ಬಸವನಬಾಗೇವಾಡಿ ತಾಲೂಕು ಗಾಣಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಗಾಣಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘ, ನಗರ ಘಟಕ ಮತ್ತು ಮಹಿಳಾ ಘಟಕದ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಮಾಜದ ಪ್ರತಿಭಾವಂತ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ನನ್ನ ಅವಧಿಯಲ್ಲಿ ಕ್ಷೇತ್ರದಲ್ಲಿ ಕುಡಿಯುವ ನೀರು, ನೀರಾವರಿ ಯೋಜನೆಗಳು, ಎನ್.ಟಿ.ಪಿ.ಸಿ., ರಾಷ್ಟ್ರೀಯ ಹೆದ್ದಾರಿ, ಕೊರ್ತಿ, ಕೊಲ್ಹಾರ ಸೇತುವೆ ನಿರ್ಮಾಣ, ಬಸ್ ಘಟಕ, ಮಿನಿ ವಿಧಾನಸೌಧ ಸೇರಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಆದರೂ ಕ್ಷೇತ್ರದ ಜನತೆ ನನ್ನ ಕೈಹಿಡಿಯಲ್ಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕೊಲ್ಹಾರದ ದಿಗಂಬರೇಶ್ವರ ಸಂಸ್ಥಾನಮಠದ ಕಲ್ಲಿನಾಥ ದೇವರು ಮಾತನಾಡಿ, ಗಾಣಿಗ ಸಮಾಜದ ಬಾಂಧವರು ಸ್ವಾಭಿಮಾನಿ ಬಂಧುಗಳು ಮತ್ತು ಹೃದಯ ವೈಶಾಲತೆ ಹೊಂದಿದವರು. ಜಿಲ್ಲೆಯಲ್ಲಿ ಸಮಾಜ ಸಂಘಟನೆ ಮಾಡಬೇಕು. ಬಸವನಬಾಗೇವಾಡಿ, ಇಂಡಿ, ಸಿಂದಗಿ 3 ಕ್ಷೇತ್ರದಲ್ಲಿ ನಮ್ಮ ಸಮಾಜದವರೇ ಮರಳಿ ಶಾಸಕರಾಗುವ ರೀತಿಯಲ್ಲಿ ಪದಾಧಿಕಾರಿಗಳು ಸಮಾಜ ಸಂಘಟಿಸಬೇಕು ಎಂದರು.

ಕಲ್ಲು ಸೊನ್ನದ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ದನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಸಿದ್ಧಲಿಂಗ ಚೌಧರಿ, ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಡೋಣಗಿ, ತಾ.ಪಂ ಮಾಜಿ ಅಧ್ಯಕ್ಷ ಕಲ್ಲು ಸೊನ್ನದ, ತಾಲೂಕು ನೌಕರರ ಸಂಘದ ಅಧ್ಯಕ್ಷ ಎಂ.ಎಸ್. ಸಜ್ಜನ, ಅರವಿಂದ ಸಜ್ಜನ, ಪರಶುರಾಮ ತುಪ್ಪದ, ಶ್ರೀಶೈಲ ಪರಮಗೊಂಡ, ಡಾ.ಆರ್.ಜಿ.ಡಳೆ, ಎಸ್.ಎಂ.ಹಂಗರಗಿ, ಸುರೇಶ ಗೊಲಗೊಂಡ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ತುಪ್ಪದ, ಸೇಗರಪ್ಪ ಮುಡನಾಳ ಇತರರಿದ್ದರು.
ಬಸವರಾಜ ಚನ್ನಗೊಂಡ ಸ್ವಾಗತಿಸಿದರು. ವಿ.ಎಸ್. ಸಜ್ಜನ ನಿರೂಪಿಸಿದರು. ಬಸವರಾಜ ಕೊಣಿನ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net