ಸರಗಳ್ಳರ ಬಂಧನ

VJP Crime
Published on

ವಿಜಯಪುರ: ಬಸವನಬಾಗೇವಾಡಿಯಲ್ಲಿ ಇತ್ತೀಚೆಗೆ ಘಟಿಸಿದ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಸಿಂದಗಿ ತಾಲೂಕಿನ ಕಲಕೇರಿ ಗ್ರಾಮದ ಶರಣಪ್ಪ ಸಿದ್ದಪ್ಪ ಕತ್ತಿ ಹಾಗೂ ನಾಸಿರಹ್ಮದ್ ಪೀರಸಾಬ್ ಪಟೇಲ್(ಬಿರಾದಾರ) ಬಂಧಿತ ಆರೋಪಿಗಳು. ಇವರಿಂದ 34.67 ಗ್ರಾಂ ಚಿನ್ನದ ಸರ ಹಾಗೂ ಮೋಟರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ.

ಅ. 3 ರಂದು ಬಸವನಬಾಗೇವಾಡಿ ಪಟ್ಟಣದ ಐಡಿಎಫ್‌ಸಿ ಬ್ಯಾಂಕ್ ಹತ್ತಿರ ನಡೆದುಕೊಂಡು ಹೊರಟಿದ್ದ ಕಮಲಾ ಶಿವಪ್ಪ ರತ್ತಳ್ಳಿ ಅವರ ಚಿನ್ನದ ಸರ ದೋಚಿದ ಬಗ್ಗೆ ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.

ಡಿವೈಎಸ್‌ಪಿ ಶಾಂತವೀರ ಅವರ ಮಾರ್ಗದರ್ಶನದಲ್ಲಿ ಸಿಪಿಐ ಸೋಮಶೇಖ ಜುಟ್ಟಲ್, ಪಿಎಸ್‌ಐ ಚಂದ್ರಶೇಖರ ಹೆರಕಲ್ ನೇತೃತ್ವದ ತಂಡ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ ಎಂದು ಎಸ್‌ಪಿ ಅನುಪಮ್ ಅಗರವಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net