

ಬಸವನಬಾಗೇವಾಡಿ: ಪುರಸಭೆ ಚುನಾವಣೆ ವೇಳೆ ಕೆಲ ಕಾರಣಗಳಿಂದ ಕಾರ್ಯಕರ್ತರಿಗೆ ಪಕ್ಷದ ಬಿ-ಾರ್ಮ್ ಸಿಗಲಿಲ್ಲ. ಅವರೆಲ್ಲ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಈಗ ಮರಳಿ ಗೂಡಿಗೆ ಸೇರಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.
ಶನಿವಾರ ಸ್ಥ್ಥಳೀಯ ಪಿಎಲ್‌ಡಿ ಬ್ಯಾಂಕ್‌ನಲ್ಲಿ ಪುರಸಭೆ ಪಕ್ಷೇತರ ಸದಸ್ಯರಾದ ರಜಾಕಬಿ ಬಮ್ಮನಳ್ಳಿ, ರೇಖಾ ಬೆಕಿನಾಳ, ಪ್ರವೀಣಕುಮಾರ ಪೂಜಾರಿ ಅವರಿಗೆ ಪಕ್ಷದ ಬಾವುಟ ನೀಡಿ ಸ್ವಾಗತಿಸಿ ಅವರು ಮಾತನಾಡಿದರು.
ಮುಂಬರುವ ದಿನಗಳಲ್ಲಿ ರಾಜಕೀಯ ಬೆಳವಣಿಗೆಯಲ್ಲಿ ಪಕ್ಷೇತರರಿಗೆ ಅವಕಾಶ ಸಿಕ್ಕಾಗ ವಿಶೇಷ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ. ಶಾಸಕರು, ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಕುರಿತಾಗಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಕಾಂಗ್ರೆಸ್ ಸೇರ್ಪಡೆಯಾದವರನ್ನು ಕಾಂಗ್ರೆಸ್ ಸದಸ್ಯರು ಇಲ್ಲವೆ ಕಾರ್ಯಕರ್ತರೆಂಬ ಭಾವದಿಂದ ಅವರಿಗೆ ಪಕ್ಷವೂ ಕೂಡ ಜವಾಬ್ದಾರಿ ನೀಡಲಿದೆ.
ನ. 3 ರಂದು ಪುರಸಭೆ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆಯಲಿದ್ದು, ಪಕ್ಷದ ಹೈಕಮಾಂಡ್ ನಿರ್ಧಾರದಂತೆ ಸದಸ್ಯರಿಗೆ ವಿಪ್ ಜಾರಿಗೊಳಿಸಲಾಗುವುದು ಎಂದು ಹೇಳಿದರು.
ಮುಖಂಡರಾದ ಭರತು ಅಗರವಾಲ್, ಪುರಸಭೆ ಮಾಜಿ ಅಧ್ಯಕ್ಷ ಸಂಗನಬಸು ಪೂಜಾರಿ, ಪ್ರಧಾನ ಕಾರ್ಯದರ್ಶಿ ರವಿ ರಾಠೋಡ, ಚನ್ನು ಹಡಪದ, ಪ್ರಕಾಶ ಮುರಾಳ, ಮತಾಬ ಬಮ್ಮನಳ್ಳಿ, ಶಿವಾನಂದ ಹಡಪದ ಸೇರಿದಂತೆ ಮತ್ತಿತರರು ಇದ್ದರು.