ಸಕಾರಾತ್ಮಕ ಚಿಂತನೆಯಿಂದ ಮುಖ್ಯವಾಹಿನಿಗೆ ಬನ್ನಿ

Shivanand Patil
Published on

ಬಸವನಬಾಗೇವಾಡಿ: ಅಂಗವಿಕಲರು ನಕಾರಾತ್ಮಕ ಆಲೋಚನೆ ಕೈಬಿಟ್ಟು ಸಕಾರಾತ್ಮಕ ಚಿಂತನೆಯಿಂದ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಶಾಸಕ ಶಿವಾನಂದ ಪಾಟೀಲ ಸಲಹೆ ನೀಡಿದರು.

ಪಟ್ಟಣದ ತಾ.ಪಂ. ಆವರಣದಲ್ಲಿ ಪುರಸಭೆ, ಜಿಲ್ಲಾ ಅಂಗವಿಕಲರ ಸಬಲೀಕರಣ ಇಲಾಖೆ, ತಾಪಂ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪುರಸಭೆ ತಾಪಂ 2017-18ನೇ ಸಾಲಿನ ಅನುದಾನದಲ್ಲಿ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಿಸಿ ಅವರು ಮಾತನಾಡಿದರು.

ರಾಷ್ಟ್ರಕ್ಕೆ ಅಂಗವಿಕಲರು ವಿಶಿಷ್ಟ ಕೊಡುಗೆ ನೀಡಿದ್ದಾರೆ. ಸಾಧನೆ ಮಾರ್ಗದಲ್ಲಿ ಸಾಗಲು ಸ್ಫೂರ್ತಿಯನ್ನು ಪ್ರತಿಯೊಬ್ಬರೂ ಇಮ್ಮಡಿಗೊಳಿಸಿಕೊಂಡು ಕಷ್ಟಗಳನ್ನು ಲೆಕ್ಕಿಸದೆ ಸಾಗಬೇಕು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿದರು. ಜಿಲ್ಲಾ ಅಂಗವಿಕಲರ ಸಬಲೀಕರಣ ಇಲಾಖೆ ವಿ.ಜಿ. ಉಪಾಧ್ಯೆ, ಪುರಸಭೆ ಮುಖ್ಯಾಧಿಕಾರಿ ಬಿ.ಎ. ಸೌದಾಗರ, ಜಿಪಂ ಮಾಜಿ ಅಧ್ಯಕ್ಷ ಚಂದ್ರಶೇಖರಗೌಡ ಪಾಟೀಲ, ಕೊಲ್ಹಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಫೀಕ್ ಪಕಾಲಿ, ರವಿ ರಾಠೋಡ, ತಾಪಂ ಮಾಜಿ ಅಧ್ಯಕ್ಷ ಕಲ್ಲು ಸೊನ್ನದ, ಪುರಸಭೆ ಸದಸ್ಯರಾದ ಪ್ರವೀಣ ಪೂಜಾರಿ, ದೇವೇಂದ್ರ ಚವಾಣ್, ರಾಜು ಭೂತನಾಳ, ರವಿ ನಾಯ್ಕೋಡಿ, ತಾಪಂ ಸದಸ್ಯ ಶಿವಾನಂದ ಅಂಗಡಿ, ಮುಖಂಡರಾದ ತಾನಾಜಿ ನಾಗರಾಳ, ನಿಸಾರ್ ಚೌಧರಿ, ಜಟ್ಟಿಂಗರಾಯ ಮಾಲಗಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net