ಮನಗೂಳಿಯಲ್ಲಿ ಹಳೇ ಪೆನಲ್‌ಗೆ ಭರ್ಜರಿ ಗೆಲುವು

Published on

ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮಿಣ ಕೃಷಿ ಸಹಕಾರಿ ಸಂಘದ ಚುನಾವಣೆಯಲ್ಲಿ ಹಳೇ ಪೆನಲ್‌ಗೆ ಭಾನುವಾರ ಭರ್ಜರಿ ಗೆಲುವುವಾಗಿದೆ. ಒಟ್ಟು 12 ಸ್ಧಾನಗಳಿಗೆ ಚುನಾವಣೆ ನಡೆದಿದೆ.

ಸಾಲಗಾರ ಸಾಮಾನ್ಯ ಕ್ಷೇತ್ರದಿಂದ 5 ಹಾಗೂ ಸಾಮಾನ್ಯ ಮಹಿಳೆ 2 ಸ್ಥಾನಕ್ಕೆ, ಹಿಂದುಳಿದ ವರ್ಗ (ಅ) ಕ್ಷೇತ್ರಕ್ಕೆ ಒಂದು ಹಾಗೂ (ಬ) ಕ್ಷೇತ್ರಕ್ಕೆ ಒಂದು, ಸಾಲಗಾರಲ್ಲದ (ಬಿನ್ ಸಾಲಗಾರ) ಕ್ಷೇತ್ರಕ್ಕೆ ಒಂದು ಸ್ಥಾನಕ್ಕೆ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಕ್ಷೇತ್ರಕ್ಕೆ ತಲಾ ಒಂದೊಂದು ಸ್ಥಾನಕ್ಕೆ ಚುನಾವಣೆ ಜರುಗಿತು. ಸಂಘದ ಒಟ್ಟು 1228 ಮತದಾರರಲ್ಲಿ 955 ಮತದಾರರು ಹಕ್ಕು ಚಲಾಯಿಸಿದ್ದಾರೆ.

ಕ್ಷೇತ್ರಗಳ ವಿವರ: ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಬಾಬು ಬಾಪುರಾವ್ ಯಾದವಾಡ 490 ಮತಗಳು, ಗೊಳ್ಳಾಳಪ್ಪ ಸಿದ್ದಗೊಂಡಪ್ಪ ಗುಜಗೊಂಡ 485 ಮತಗಳು, ಫಿರ್ ಅಹ್ಮದ ಮಹ್ಮದಸಾಬ್ ಮಣ್ಣೂರ 436 ಮತಗಳು, ಬಾಬು ವಿಠ್ಠಲ ನರಳೆ 406 ಮತಗಳು ಹಾಗೂ ಸಂಗಪ್ಪ ಬಸಪ್ಪ ಹುಣಶಿಕಟ್ಟಿ 392 ಮತಗಳನ್ನು ಪಡೆದು ಜಯಶಾಲಿಯಾಗಿದ್ದಾರೆ.

ಸಾಮಾನ್ಯ ಮಹಿಳಾ ಸಾಲಗಾರ ಕ್ಷೇತ್ರದಿಂದ: ಸುನಂದಾ ಗುರಪ್ಪ ಪದಮಣ್ಣ 475 ಮತಗಳು ಹಾಗೂ ರೇಣುಕಾ ಶಿವಾನಂದ ತರ್ಪದಾರ 455 ಮತಗಳನ್ನು ಪಡೆದು ಜಯಶಾಲಿಯಾಗಿದ್ದಾರೆ.

ಸಾಲಗಾರರ ಹಿಂದುಳಿದ ವರ್ಗ ಅ ಕ್ಷೇತ್ರದಿಂದ ದ್ಯಾಮಣ್ಣ ಭೀಮಪ್ಪ ರೊಳ್ಳಿ 507 ಮತಗಳು ಹಾಗೂ (ಬ) ಕ್ಷೇತ್ರದಿಂದ ರಾಮಗೊಂಡಪ್ಪ ಮಡಿವಾಳಪ್ಪ ಬಿರಾದಾರ 464 ಮತಗಳನ್ನು ಪಡೆದು ಜಯಶಾಲಿಯಾಗಿದ್ದಾರೆ.

ಸಾಮಾನ್ಯ ಸಾಲಗಾರಲ್ಲದ (ಬಿನ್ ಸಾಲಗಾರ) ಕ್ಷೇತ್ರದಿಂದ ಬಸವರಾಜ ಸೋಮನಗೌಡ ಬಿರಾದಾರ 139 ಮತಗಳನ್ನು ಪಡೆದು ಜಯಶಾಲಿಯಾಗಿದ್ದಾರೆ.

ಸಾಲಗಾರ ಪರಿಶಿಷ್ಟ ಜಾತಿ ಕ್ಷೇತ್ರದಿಂದ ದೇಯಪ್ಪ ಈಶ್ವರಪ್ಪ ನಾಯ್ಕರ್ 494 ಮತಗಳು ಹಾಗೂ ಸಾಲಗಾರ ಪರಿಶಿಷ್ಟ ಪಂಗಡ ಕ್ಷೇತ್ರದಿಂದ ನಂದಪ್ಪ ಹಣಮಂತಪ್ಪ ನಾಟಿಕಾರ 489 ಮತಗಳನ್ನು ಪಡೆದು ಜಯಶಾಲಿಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಎನ್.ಎಂ. ಅವಟಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net