ಸಿಡಿಲು ಬಡಿದು ತಾಯಿ-ಮಗಳು ಸಾವು

BBGD-10-3
Published on

ಬಸವನಬಾಗೇವಾಡಿ: ತಾಲೂಕಿನ ಕಡಕೋಳ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಸಿಡಿಲು ಬಡಿದು ತಾಯಿ -ಮಗಳು ಸ್ಥಳದಲ್ಲೇ ಮೃತಪಟ್ಟರೆ, ಆಕೆಯ ಪತಿ ಗಂಭೀರ ಗಾಯಗೊಂಡಿದ್ದಾರೆ.

ಕಡಕೋಳದ ಗ್ರಾಮದ ಮಹಾದೇವಿ ಯಂಕಪ್ಪ ಬಜಂತ್ರಿ (40), ಅಂಜಲಿ ಊರ್ಫ್ ಸೋನು ಯಂಕಪ್ಪ ಬಜಂತ್ರಿ (12) ಮೃತಪಟ್ಟವರು. ಮಹಾದೇವಿ ಗಂಡ ಯಂಕಪ್ಪ ಬಜಂತ್ರಿ (50) ತೀವ್ರ ಗಾಯಗೊಂಡು ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗ್ರಾಮದ ಸಿಂಧಗೇರಿ ರಸ್ತೆಯ ಮಾರ್ಗದಲ್ಲಿನ ಜಮೀನಿನಲ್ಲಿ ತಂದೆ- ತಾಯಿ ಹಾಗೂ ಮಗಳು ಕೆಲಸಕ್ಕೆ ತೆರಳಿದಾಗ ಶನಿವಾರ ಮಧ್ಯಾಹ್ನ 1.30ರ ಸುಮಾರಿಗೆ ಭಾರಿ ಮಳೆ ಸುರಿದಿದೆ. ಮಳೆಯಿಂದ ರಕ್ಷಿಸಿಕೊಳ್ಳಲು ಜಮೀನಿನಲ್ಲಿರುವ ಬೇವಿನ ಮರದ ಕೆಳಗೆ ನಿಂತಿದ್ದಾಗ ಸಿಡಿಲು ಬಡಿದಿದೆ. ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net