

ಬಸವನಬಾಗೇವಾಡಿ: ರಾಜ್ಯದಲ್ಲಿರುವ ತಳವಾರ, ಪರಿವಾರ ಜನಾಂಗದವರು ಪ್ರವರ್ಗ ಪಟ್ಟಿಯಲ್ಲಿದ್ದು, ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಹಾಗೂ ಸರ್ಕಾರಿ ಸೇವೆಯಲ್ಲಿರುವ ಜನರು ಬಡ್ತಿ ಪಡೆಯದೆ ವಂಚಿತರಾಗುತ್ತಿದ್ದು, ಅವರಿಗೆ ಸಾಮಾಜಿಕ ನ್ಯಾಯದ ಹಕ್ಕನ್ನು ನೀಡಬೇಕೆಂದು ಆಗ್ರಹಿಸಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಶಿರಸ್ತೆದಾರ ಎಸ್.ಡಿ. ಬಿಜಾಪುರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಸೀಲದಾರ್ ಕಚೇರಿ ಮುಂಭಾಗದಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಹಾಗೂ ತಳವಾರ, ಪರಿವಾರ ಸಮುದಾಯದ ಜನತೆ ಸಾಂಕೇತಿಕ ಧರಣಿ ನಡೆಸಿದರು.
ಜೆಡಿಎಸ್ ಮಾಡಿದ ಜೆಡಿಎಸ್ ಮುಖಂಡ ಸೋಮನಗೌಡ ಪಾಟೀಲ(ಮನಗೂಳಿ) ಮಾತನಾಡಿದರು. ತಾಪಂ ಸದಸ್ಯ ಹಾಗೂ ಸಮಾಜದ ಮುಖಂಡ ಮಲ್ಲಪ್ಪ ತಳವಾರ, ನ್ಯಾಯವಾದಿ ಎನ್.ಎಸ್. ಪಾಟೀಲ, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ಎ. ಯರನಾಳ(ವಕೀಲರು), ಮಲ್ಲಿಕಾರ್ಜುನ ಅವಟಿ, ಶಂಕರಗೌಡ ಪಾಟೀಲ(ಮನಗೂಳಿ), ಲಕ್ಷ್ಮಣ ಅಂಬಿಗೇರ, ಹಣಮಂತ ಮನ್ನಿಕೇರಿ, ಬಸಪ್ಪ ಚಂಡಕಿ, ಶಂಭು ಇಂಗಳೇಶ್ವರ, ಶರಣು ವಾಲಿಕಾರ, ಮಲ್ಲಿಕಾರ್ಜುನ ಕೋಲಕಾರ, ಕಿರಣ ಕೋಲಕಾರ, ಸಂಗು ಮದರಿ ಮತ್ತಿತರರಿದ್ದರು.