ಬಸವನಬಾಗೇವಾಡಿಯಲ್ಲಿ ಗೌರಿ ಶಂಕರ ಜಾತ್ರಾ ಮಹೋತ್ಸವ

Basavanbagewadi, Gauri Sankara Jatra Mahotsava, Pravachana, Dyamavvan Sogu, Siddhalinga Sri, Shivprakash Shivacharya, Abhinava Sanganabasa Shivacharya,
ಬಸವನಬಾಗೇವಾಡಿಯಲ್ಲಿ ಗೌರಿ ಶಂಕರ ದೇವರು.
Published on

ಬಸವನಬಾಗೇವಾಡಿ: ಪಟ್ಟಣದಲ್ಲಿ ಗೌರಿ ಶಂಕರ ಜಾತ್ರಾ ಮಹೋತ್ಸವ ಹಾಗೂ ದ್ಯಾಮವ್ವನ ಸೋಗು ಕಾರ್ಯಕ್ರಮ ಡಿ.16 ರಂದು ಜರುಗಲಿದೆ.

16 ರಂದು ಮಧ್ಯಾಹ್ನ 12ಕ್ಕೆ ಹನುಮಾನ ದೇವಸ್ಥಾನದಿಂದ ದ್ಯಾಮವ್ವನ ಸೋಗಿನ ಮೆರವಣಿಗೆ ಜರುಗಲಿದೆ. ಸಂಜೆ 6ಕ್ಕೆ ಗೌರಿ ಶಂಕರ ದೇವಸ್ಥಾನದಿಂದ ಮೆರವಣಿಗೆ ಮೂಲಕ ಬಸವತೀರ್ಥದಲ್ಲಿ ಗೌರಿ ಶಂಕರ ವಿಸರ್ಜನೆ ನೆರವೇರಲಿದೆ.

ಜಾತ್ರಾ ಮಹೋತ್ಸವ ಅಂಗವಾಗಿ ಡಿ.5 ರಿಂದ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಪ್ರವಚನ ಮಹಾಮಂಗಲ ಕಾರ್ಯಕ್ರಮ ಡಿ.15 ರಂದು ಸಂಜೆ 6.30ಕ್ಕೆ ಜರುಗಲಿದೆ.

ವಿರಕ್ತಮಠದ ಸಿದ್ಧಲಿಂಗ ಶ್ರೀಗಳು, ಹಿರೇಮಠದ ಶಿವಪ್ರಕಾಶ ಶಿವಾಚಾರ್ಯರು, ಮನಗೂಳಿಯ ಹಿರೇಮಠದ ಅಭಿನವ ಸಂಗನಬಸ ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದಾರೆ. ನೇತೃತ್ವವನ್ನು ವೀರಗಂಗಾಧರ ಸ್ವಾಮಿಗಳು, ಪ್ರವಚನಕಾರ ರಾಚಯ್ಯ ಶಾಸಿಗಳು ವಹಿಸಲಿದ್ದಾರೆ.

ಸಹಕಾರಿ ಮಹಾಮಂಡಳಿ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಪುರಸಭೆ ಮಾಜಿ ಅಧ್ಯಕ್ಷ ಜಗದೀಶ ಕೊಟ್ರಶೆಟ್ಟಿ ಉದ್ಘಾಟಿಸುವರು.

ಮುಖ್ಯ ಅತಿಥಿಗಳಾಗಿ ಬಿ.ಕೆ. ಕಲ್ಲೂರ, ಸುರೇಶ ಹಾರಿವಾಳ, ರವಿ ಪಟ್ಟಣಶೆಟ್ಟಿ, ಶೇಖರ ಗೊಳಸಂಗಿ, ಎಂ.ಜಿ. ಆದಿಗೊಂಡ, ಭರತ್ ಅಗರವಾಲ, ಶೇಖರಗೌಡ ಪಾಟೀಲ, ಸಂಗಮೇಶ ಓಲೇಕಾರ, ಶಂಕರಗೌಡ ಬಿರಾದಾರ, ರವಿ ರಾಠೋಡ, ಅಶೋಕ ಗುಳೆದ, ಪ್ರವೀಣ ಪೂಜಾರಿ, ನಾಗರಾಜ ಪಟ್ಟಣಶೆಟ್ಟಿ, ಪ್ರಕಾಶ ಬೆಣ್ಣೂರ, ಬಸವರಾಜ ನಂದಿಹಾಳ ಅನೇಕರು ಭಾಗವಹಿಸಿದ್ದಾರೆ ಎಂದು ಗೌರಿಶಂಕರ ಜಾತ್ರಾ ಉತ್ಸವ ಸಮಿತಿಯ ಅಧ್ಯಕ್ಷ ಶ್ರೀಶೈಲ ಮಠಪತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net