

ಬಸವನಬಾಗೇವಾಡಿ: ಇತಿಹಾಸ ಪ್ರಸಿದ್ಧ ಪಟ್ಟಣದ ಬಸವೇಶ್ವರ (ಮೂಲ ನಂದಿಶ್ವರ) ದೇವಾಲಯವು ಸರ್ಕಾರದ ಆದೇಶದಂತೆ ಜೂ.8ರಿಂದ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸಿದ ಭಕ್ತರ ದರ್ಶನಕ್ಕೆ ಮುಕ್ತಗೊಳಿಸಲಾಗುವುದು.
ದೇವಾಲಯದ ಮೇಲ್ವಿಚಾರಕ ಬಸವರಾಜ ಕಳ್ಳಿ ಹಾಗೂ ಸಿಬ್ಬಂದಿ ಸಹಯೋಗದಲ್ಲಿ ದೇವಾಲಯ ತೊಳೆಯುವ ಹಾಗೂ ಮುಖ್ಯದ್ವಾರದಲ್ಲಿ ಸ್ಯಾನಿಟೈಸರ್ ಸಿಂಪರಣೆ, ಪ್ರವೇಶ ದ್ವಾರದಲ್ಲಿ ಭಕ್ತರು ಕೈಕಾಲು ತೊಳೆದು ಬರಲು ನೀರಿನ ವ್ಯವಸ್ಥೆ, ಥರ್ಮಲ್ ಸ್ಕ್ರೀನಿಂಗ್, ಭಕ್ತರು ಸರಣಿಯಲ್ಲಿ ನಿಂತುಕೊಳ್ಳಲು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಾಕ್ಸ್‌ಗಳನ್ನು ಗುರುತಿಸಲಾಗಿದೆ ಎಂದು ಹೇಳಿದರು.
ಜೂ.8 ರಂದು ದೇವಾಲಯಗಳ ಬಾಗಿಲು ತೆರೆದು ಭಕ್ತರಿಗೆ ಅವಕಾಶ ಕಲ್ಪಿಸಲು ಸರ್ಕಾರದ ಆದೇಶ ನೀಡಿರುವ ಹಾಗೂ ಕೆಲ ನಿಬಂಧನೆಗಳನ್ನು ವಿಧಿಸಿದಂತೆ ಅರ್ಚಕರು ಪೂಜೆ ಸಲ್ಲಿಸಿದ ನಂತರ ಸ್ಥಳೀಯ ಬಸವೇಶ್ವರ ದೇವಾಲಯಕ್ಕೆ ತೆರಳಿ ಕೇವಲ ದರ್ಶನ ಪಡೆಯಬಹುದಾಗಿದೆ. ಆದರೆ, ದೇವಾಲಯದಲ್ಲಿ ಯಾವುದೇ ಹಣ್ಣು-ಕಾಯಿ-ಕರ್ಪೂರ ಹಾಗೂ ನೈವೇದ್ಯ ತೆಗೆದುಕೊಂಡು ಹೋಗಲು ನಿಷೇಧಿಸಿದ್ದು, ದೇವಾಲಯದಲ್ಲಿ ಯಾವುದೇ ಬಗೆಯ ಅಭಿಷೇಕ, ಅರ್ಚನೆಗಳು ನಡೆಯುವುದಿಲ್ಲ. ಅರ್ಚಕರು ತೀರ್ಥ-ಪ್ರಸಾದ ಕೂಡ ನೀಡುವಂತಿಲ್ಲ. ನಿತ್ಯ ನಡೆಯುತ್ತಿದ್ದ ದಾಸೋಹ (ಪ್ರಸಾದ) ವಿತರಣೆ ತಟಸ್ಥಗೊಳಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಸರ್ಕಾರದ ನಿರ್ದೇಶನ ಅನ್ವಯ ಜೂ.8 ರಿಂದ ಸಾಮಾಜಿಕ ಅಂತರ, ಮಾಸ್ಕ್ ಧರಿಸಿ ಬರುವ ಭಕ್ತರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುವುದು. ನಾರ್ಮಲ್ ಬಂದವರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡಲಾಗುವುದು. ದೇವಾಲಯದಲ್ಲಿ ಯಾವುದೇ ಸೇವೆಗಳು ಇಲ್ಲವೆ ಭಕ್ತರು ಹಣ್ಣು-ಹಂಪಲು ವಸ್ತುಗಳನ್ನು ತರುವುದನ್ನು ನಿಷೇಧಿಸಲಾಗಿದೆ.
ರಾಜಶ್ರೀ ಅಗಸರ, ಕೂಡಲಸಂಗ ಅಭಿವೃದ್ಧಿ ಮಂಡಳಿ ಆಯುಕ್ತೆ