ಸಾಲ ಮರುಪಾವತಿಸಿ ಸಹಕಾರಿ ಸಂಘ ಉಳಿಸಿ

HHP 20-1
Published on

ಹೂವಿನಹಿಪ್ಪರಗಿ: ಸಹಕಾರಿ ಸಂಘದ ಸರ್ವ ಸದಸ್ಯರು ತಾವು ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿಸಿ ಸಂಘದ ಏಳಿಗೆಗೆ ಸಹಕರಿಸಬೇಕು ಎಂದು ಪಿಕೆಪಿಎಸ್ ಅಧ್ಯಕ್ಷ ಶಿವಣ್ಣ ಬ್ಯಾಕೋಡ ಹೇಳಿದರು.

ಸಮೀಪದ ವಡವಡಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 79ನೇ ವಾರ್ಷಿಕ ಸರ್ವಸಾಧಾರಣ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ರಿಯಾಯಿತಿ ದರದಲ್ಲಿ ರಸಗೊಬ್ಬರ ಮಾರಾಟ ಸೇರಿದಂತೆ ಬೆಂಬಲ ಬೆಲೆಯಲ್ಲಿ ಕಡಲೆ ಮತ್ತು ತೊಗರಿ ಖರೀದಿ ಮಾಡಲಾಗುವುದು. ಸಂಘದ ವ್ಯಾಪ್ತಿಗೆ ಬರುವ ಎಲ್ಲ ರೈತ ಬಾಂಧವರು ಇದರ ಲಾಭ ಪಡೆದು ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.

ಸ್ಥಳೀಯ ವಿರಕ್ತಮಠದ ಶ್ರೀಗುರು ವೀರ ಸಿದ್ಧ್ದೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಸಂಘದ ಉಪಾಧ್ಯಕ್ಷ ಶರಣಗೌಡ ಕೋಳೂರ, ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಡೆಂಗಿ, ಜಿ.ಎಸ್.ಪಾಟೀಲ, ನಾನಾಗೌಡ ಬಿರಾದಾರ, ಗುರಬಸಪ್ಪ ಸಜ್ಜನ, ಮಾನಪ್ಪ ಮುರಡಿ, ಮಲ್ಲಯ್ಯ ವಿರಕ್ತಮಠ, ತಾಪಂ ಸದಸ್ಯ ಮಲ್ಲು ತಳವಾರ, ನಿರ್ದೇಶಕರಾದ ಚನ್ನಮಲ್ಲಪ್ಪ ವಾಲಿ, ರುದ್ರಗೌಡ ಧನ್ನೂರ, ಸಿದ್ದಪ್ಪ ಬಶೆಟ್ಟಿ, ಸಂಗಣ್ಣ ಕಡೇಕಲ್ಲ, ರೇಣುಕಾ ಸಜ್ಜನ, ಗೌರವ್ವ ಮಾದರ, ಶಿವಪ್ಪ ತಳವಾರ, ಸೋಮಪ್ಪ ಜಾಲವಾದಿ, ಬಸಪ್ಪ ತ್ತೇಪುರ, ಭೀಮು ಲಮಾಣಿ, ಸಿಬ್ಬಂದಿ ಗುರಣ್ಣ ಹೂಗಾರ, ಬಸವರಾಜ ನಾಟಿಕಾರ, ಚನ್ನಪ್ಪ ತಳೇಕರ ಇದ್ದರು. ಮುಖ್ಯಕಾರ್ಯನಿರ್ವಾಹಣಾಧಿಕಾರಿ ಬಾಬು ಬಗಲಿ ಸ್ವಾಗತಿಸಿದರು. ಸಂಗನಗೌಡ ಬಿರಾದಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net