ಬಸವನಗುಡಿ ಕಡ್ಲೆಕಾಯಿ ಪರಿಷೆ 3 ದಿನಕ್ಕೆ ಸೀಮಿತಗೊಳಿಸಿ

Vijayavani-Featured-Image
Published on

ಬೆಂಗಳೂರು: ಬಸವನಗುಡಿಯಲ್ಲಿ ನಡೆಯುತ್ತಿರುವ ಕಡಲೆಕಾಯಿ ಪರಿಷೆ ಈ ಮುಂಚಿನಂತೆ ನಡೆಸುತ್ತಿದ್ದ ರೀತಿಯಲ್ಲೇ ಮೂರು ದಿನಕ್ಕೆ ಸೀಮಿತಗೊಳಿಸಿ ಸ್ಥಳೀಯ ಪರಿಸರ, ಸ್ವಚ್ಛತೆ, ಹಾಗೂ ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು ಎಂದು ಹೆರಿಟೇಜ್ ಬಸವನಗುಡಿ ರೆಸಿಡೆಂಟ್ಸ್ ವೆಲ್​​ಫೇರ್ ಫೋರಂ, ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದೆ.

ಈ ವರ್ಷ ವಾರಾಂತ್ಯ ಸೇರಿ ಐದು ದಿನ ಪರಿಷೆಗೆ ಅವಕಾಶ ಮಾಡಿಕೊಟ್ಟಿರುವ ಕಾರಣ ಬಸವನಗುಡಿ ದೇಗುಲ ಸೇರಿ ಅದರ ಆಸುಪಾಸಿನ ಸ್ಥಳಗಳಲ್ಲಿ ಕಸ ರಾಶಿ ಬಿದ್ದಿದೆ. ಜತೆಗೆ ಅಲ್ಲಿನ ರಸ್ತೆಗಳಲ್ಲಿ ನೈರ್ಮಲ್ಯ ಕಾಪಾಡುವ ಕೆಲಸ ಸಮರ್ಪಕವಾಗಿ ನಡೆದಿಲ್ಲ. ಇದರಿಂದ ಸ್ವಚ್ಛತೆ ಇಲ್ಲದೆ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಜತೆಗೆ ಇಲ್ಲಿಯ ನಿವಾಸಿಗಳ ಹಾಗೂ ಹಿರಿಯ ನಾಗರಿಕರ ಹಿತದೃಷ್ಟಿಯಿಂದ ಪರಿಷೆಯಿಂದ ಉಂಟಾಗಿರುವ ತ್ಯಾಜ್ಯ ಹಾಗೂ ಇನ್ನಿತರ ಅಳಿದುಳಿದ ವಸ್ತುಗಳನ್ನು ಕೂಡಲೇ ತೆರವು ಮಾಡಿಸಲು ಸಹಕಾರ ನೀಡಬೇಕು. ಜತೆಗೆ ಇನ್ನು ಮುಂದೆ ಪರಿಷೆಯನ್ನು 3 ದಿನ ಮಾತ್ರ ನಡೆಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಫೋರಂನ ಕಾರ್ಯದರ್ಶಿ ಗುರುಪ್ರಸಾದ್ ರೊಟ್ಟಿ ಅವರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net