ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ಆಗ್ರಹ

BBGD-5-2
Published on

ಬಸವನಬಾಗೇವಾಡಿ: ಉತ್ತರ ಪ್ರದೇಶದ ಹಾಥರಸ್‌ದಲ್ಲಿ ಯುವತಿ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಖಂಡಿಸಿ ಖಂಡಿಸಿ ರಾಷ್ಟ್ರೀಯ ಬಸವ ಸೈನ್ಯ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಂ.ಎನ್. ಬಳಿಗಾರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಬಸವಸೈನ್ಯ ತಾಲೂಕು ಅಧ್ಯಕ್ಷ ಸಂಜುಗೌಡ ಬಿರಾದಾರ ಮಾತನಾಡಿ, ಸರ್ಕಾರ ಒಂದೇ ದಿನದಲ್ಲಿ ನೋಟ್ ಬ್ಯಾನ್ ಮಾಡುತ್ತದೆ. ಒಂದೇ ದಿನ ಟಿವಿ ಪ್ರಸಾರ ಬ್ಯಾನ್ ಮಾಡುತ್ತದೆ. ಆದರೆ, ಅತ್ಯಾಚಾರಿಗಳು ಸಿಕ್ಕರೂ ಒಂದೇ ದಿನದಲ್ಲೇಕೆ ಗಲ್ಲಿಗೇರಿಸುವುದಿಲ್ಲ ಎಂದು ಪ್ರಶ್ನಿಸಿದರಲ್ಲದೆ, ಅತ್ಯಾಚಾರಿಗಳಿಗೆ ತಕ್ಷಣ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.

ಸಂಗಮೇಶ ಜಾಲಗೇರಿ, ಅಮೃತ ಬಾಗೇವಾಡಿ, ಚೇತನ ಗೊಳಸಂಗಿ, ವೀರೇಶ ಗಬ್ಬೂರ, ವಿಶಾಲ ಗೊಳಸಂಗಿ, ಬಸವರಾಜ ಬಾಗೇವಾಡಿ, ವಿಜಯ ಹತ್ತರಕಿಹಾಳ, ವಿಶ್ವಾಸ ಹಿಟ್ನಳ್ಳಿ, ಮಹಾಂತೇಶ ಹಿರೇಮಠ, ಪವನ ರಾಠೋಡ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net