ವಾರಿಯರ್ಸ್ ಸೇವೆ ಅನನ್ಯ

BBGD 14-1
Published on

ಬಸವನಬಾಗೇವಾಡಿ: ಕೋವಿಡ್ ನಿಯಂತ್ರಿಸುವಲ್ಲಿ ಕರೊನಾ ವಾರಿಯರ್ಸ್ ಸೇವೆ ಅಮೋಘ ಎಂದು ಪುರಸಭೆ ಮುಖ್ಯಾಧಿಕಾರಿ ಬಿ.ಎ.ಸೌದಾಗರ ಹೇಳಿದರು.

ಪಟ್ಟಣದಲ್ಲಿ ಕರೊನಾ ವಾರಿಯರ್‌ಗಳಾದ ಸರ್ಕಾರಿ ವೈದ್ಯರು, ನರ್ಸ್ ಹಾಗೂ ಸಿಬ್ಬಂದಿ ವರ್ಗಕ್ಕೆ ವಿವೇಕ ಬ್ರಿಗೇಡ್ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸಾಬೀರ ಪಟೇಲ, ಸಾರ್ವಜನಿಕರು, ಸಂಘ ಸಂಸ್ಥೆಯವರು ನಮ್ಮನ್ನು ಗೌರವಿಸಿ ಸನ್ಮಾನಿಸುವುದನ್ನು ನೋಡಿದರೆ ಭಗವಂತ ನಮ್ಮ ಸೇವೆಯನ್ನು ನಿಜವಾಗಿಯೂ ಒಪ್ಪಿದ್ದಾನೆ ಎಂದು ಭಾವುಕರಾಗಿ ಹೇಳಿದರು.

ಸಾಹಿತಿ ಪ್ರಭಾಕರ ಖೇಡದ, ತಾಲೂಕು ಪತಂಜಲಿ ಯೋಗ ಸಮಿತಿ ಸಂಚಾಲಕ ಕಾಶಿನಾಥ ಅವಟಿ, ಸ್ಥಳೀಯ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ, ಇಟಗಿ ಹಿರೇಮಠದ ಗುರುಶಾಂತವೀರ ಶಿವಾಚಾರ್ಯರು, ವಿವೇಕ ಬ್ರಿಗೇಡ್‌ನ ವಿನೂತ್ ಕಲ್ಲೂರ, ಮುಖಂಡರಾದ ಬಸವರಾಜ ಕೋಟಿ, ರವಿ ಚಿಕ್ಕೊಂಡ, ಶರಣು ವಾಲಿಕಾರ, ಶಿವಾನಂದ ತೋಳನೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net