ಸರ್ಕಾರದ ಸಾಧನೆಗಳ ಕರಪತ್ರ ವಿತರಣೆ

BBGD 15-3
Published on

ಬಸವನಬಾಗೇವಾಡಿ: ಪುರಸಭೆ ವ್ಯಾಪ್ತಿಯ 1,2 ಮತ್ತು 7ನೇ ವಾರ್ಡ್ ಸೇರಿದಂತೆ ವಿವಿಧ ವಾರ್ಡ್‌ಗಳಲ್ಲಿ ಮನೆ-ಮನೆಗೆ ತೆರಳಿದ ಬಿಜೆಪಿ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆ ಕರಪತ್ರಗಳನ್ನು ವಿತರಿಸಿ ಜನಜಾಗೃತಿ ಅಭಿಯಾನ ನಡೆಸಿದರು.
ಪಟ್ಟಣದ ಗಣಪತಿ ವೃತ್ತ್ತದಲ್ಲಿ ನಡೆದ ಜನಜಾಗೃತಿ ಸಭೆಯಲ್ಲಿ ಮುಖಂಡ ಅಶೋಕ ಬಾಗೇವಾಡಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳು ಜನಪರ ಕಾಳಜಿಯೊಂದಿಗೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ದೇಶಾದ್ಯಂತ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ ಎಂದರು.
ಮಲ್ಲನಗೌಡ ಅಥಣಿ, ಪ್ರಶಾಂತ ಪೂಜಾರಿ ಮಾತನಾಡಿದರು. ಮಲಕಾಜಿ ಹಂಜಗಿ, ಬಸಪ್ಪ ತೆಗ್ಗಿ, ಬಸಪ್ಪ ಸುಂಕದ, ಶಿವಪ್ಪ ದಂಡಿನ, ವೀರಭದ್ರಪ್ಪ ಗುಳೇದ, ದೊಡ್ಡಪ್ಪ ಅವಟಿ, ಸಂಗಪ್ಪ ಗುಳೇದ, ಮಹಾದೇವ ಚನ್ನಿ, ಗುರಪ್ಪ ಅವಟಿ, ಗೊಲ್ಲಾಳಪ್ಪ ಜಾಡರ, ಗುರಪ್ಪ ತುಂಬಗಿ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net