

ಬೆಳಗಾವಿ : ತಾಲೂಕಿನ ಬಸವನ ಕುಡಚಿ ಗ್ರಾಮದ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ನಗರ ಕುಟುಂಬ ಕಲ್ಯಾಣ ಕೇಂದ್ರದಲ್ಲಿ 77ನೇ ಸ್ವಾತಂತ್ರೃ ದಿನಾಚರಣೆಯನ್ನು ನಿವೃತ್ತ ಸೈನಿಕ ಸೈನಿಕರೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಸಂಸ್ಥೆಯ ಸದಸ್ಯರಾದ ಮನೋಹರ ಕಮ್ಮಾರ ಧ್ವಜಾರೋಹಣ ನೆರವೇರಿಸಿದರು. ಮಹಾನಗರ ಪಾಲಿಕೆ ಸದಸ್ಯರಾದ ಬಸವರಾಜ ಮೊದಗೇಕರ್ ಅವರು ಪೂಜೆ ಕೈಂಕರ್ಯ ನೆರವೇರಿಸಿದರು. ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳಾದ ಸುಚಿತಾ ಪಾಟೀಲ, ಸುನೀತಾ ಕೊಲ್ಹಾಳ, ರಾಧಾ ಹುಲ್ಲೋಳಿ, ಭಾರತಿ ಬಡಿಗೇರ, ಜಗದೀಶ ಹೊಸಮನಿ, ಮಾನಾಜಿ ಚೌಗಲೆ, ತಾನಾಜಿ ಚೌಗುಲೆ, ಮಾರುತಿ ಬೇಡಕಾ, ಸುರೇಶ ದಿವಟೆ, ಮಹೇಶ ಶಂಕರಗೌಡ, ಅಶೋಕ ಹಣ್ಣಿಕೇರಿ, ಕಲ್ಲಪ್ಪ ಶಿಂಗ್ಯಾನಕೊಪ್ಪ ಸೇರಿದಂತೆ ಬಸವೇಶ್ವರ ದೇವಸ್ಥಾನ ಕಮಿಟಿಯ ಟ್ರಸ್ಟ್ ಪದಾಧಿಕಾರಿಗಳು ಮತ್ತು ಗ್ರಾಮಸ್ತರು ಪಾಲ್ಗೊಂಡಿದ್ದರು.