

ಯಲಬುರ್ಗಾ: ಪಟ್ಟಣದ ಶ್ರೀಧರ ಮುರುಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ ಪುಣ್ಯಾರಾಧನೆ ಬುಧವಾರ ನಡೆಯಿತು. ಶ್ರೀಮಠದಲ್ಲಿ ಬೆಳಗ್ಗೆ ಶ್ರೀಗಳ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಮತ್ತು ನಾನಾ ಧಾರ್ಮಿಕ ಕಾರ್ಯಗಳು ನಡೆದವು.
ಶ್ರೀಗಳ ಭಾವಚಿತ್ರದೊಂದಿಗೆ ಪಟ್ಟಣದ ವಿವಿಧ ವೃತ್ತಗಳಲ್ಲಿ ಮೂಲಕ ಮೆರವಣಿಗೆ ನಡೆಸಲಾಯಿತು. ಭಕ್ತರಿಗೆ ಅನ್ನಸಂರ್ತಪಣೆ ನಡೆಯಿತು. ಪಪಂ ಸದಸ್ಯರಾದ ಬಸವಲಿಂಗಪ್ಪ ಕೊತ್ತಲ, ಅಮರೇಶ ಹುಬ್ಬಳ್ಳಿ, ಭಕ್ತರಾದ ವೀರಣ್ಣ ಹುಬ್ಬಳ್ಳಿ, ಅಡವಯ್ಯ ಕಲ್ಯಾಣಮಠ, ಕಳಕಪ್ಪ ಇತರರಿದ್ದರು.
ಗದ್ದಿ, ಮಲ್ಲಪ್ಪ ಸುರಕೋಡ, ಮಲ್ಲಪ್ಪ ಭೂತೆ, ಮಹಾಂತೇಶ ಭಾಸ್ಕರ, ಈಶಪ್ಪ ಸ್ಟಾಂಪಿನ, ಉಮೇಶ ಕುಂಬಾರ, ಮಹೇಶ ಹುಬ್ಬಳ್ಳಿ, ಬಸವರಾಜ ಕೊಳ್ಳಿ, ಶರಣಪ್ಪ ದಿವಟರ, ಕಳಕಪ್ಪ ಬಂಡಿಹಾಳ ಇತರರಿದ್ದರು.