ಬಸವಲಿ೦ಗಯ್ಯ ಹಿರೇಮಠ ಸ್ಮರಣಾರ್ಥ ಪ್ರತಿಷ್ಠಾನ ಅಗತ್ಯ

2 Dwd 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಜಾನಪದ ಕಲೆ, ಸಾಹಿತ್ಯ ಉಳಿಸುವ ದೆಸೆಯಲ್ಲಿ ಕೆಲಸ ಮಾಡಿದ ನಾಡಿನ ಕಂಚಿನ ಕಂಠದ ಗಾಯಕ ಬಸವಲಿಂಗಯ್ಯ ಹಿರೇಮಠರ ಹೆಸರಿನಲ್ಲಿ ಸರ್ಕಾರ ಪ್ರತಿಷ್ಠಾನ ಮಾಡುವುದು ಅವಶ್ಯಕ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲಿಕಾ ಘಂಟಿ ಹೇಳಿದರು.

ನಗರದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಜಾನಪದ ಸಂಶೋಧನಾ ಕೇಂದ್ರದಿAದ ಸೋಮವಾರ ಆಯೋಜಿಸಿದ್ದ ದತ್ತಿ ಕಾರ್ಯಕ್ರಮದಲ್ಲಿ `ಗಾನ ಗಾರುಡಿಗ ಬಸಲಿಂಗಯ್ಯ ಹಿರೇಮಠ' ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ದಕ್ಷಿಣ ಕನ್ನಡದ ಯಕ್ಷಗಾನವನ್ನು ಡಾ. ಶಿವರಾಮ ಕಾರಂತರು ಅಂತಾರಾಷ್ಟಿçÃಯ ಮಟ್ಟಕ್ಕೆ ತಲುಪಿಸಿದಂತೆ ಉತ್ತರ ಕರ್ನಾಟಕದ ಜಾನಪದ ಕಲೆಗಳನ್ನು ಹಾಗೂ ಶ್ರೀಕೃಷ್ಣ ಪಾರಿಜಾತ ಬಯಲಾಟವನ್ನು ಅಂತಾರಾಷ್ಟಿçÃಯ ಮಟ್ಟಕ್ಕೆ ತಲುಪಿಸುವಲ್ಲಿ ಬಸವಲಿಂಗಯ್ಯ ಶ್ರಮಿಸಿದರು. ಅವರ ಕಂಠದಿAದ ಬಂದ ಹುಲಿಯು ಹುಟ್ಟಿತು ಕಿತ್ತೂರ ನಾಡಾಗ ಹಾಡಿನಿಂದ ಸಂಗೊಳ್ಳಿ ರಾಯಣ್ಣನ ಹೋರಾಟ ಕಿಚ್ಚು ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು ಎಂದರು.

ಹಿರಿಯ ನಾಟಕಕಾರ ಬಿ.ಆರ್. ಪೊಲೀಸ್‌ಪಾಟೀಲ ಅವರು ಅಭಿನಂದನಾ ಪರ ನುಡಿಗಳನ್ನಾಡಿದರು.

ಕಿತ್ತೂರು ತಾಲೂಕು ಬೈಲೂರಿನ ತತ್ವಪದಕಾರ ರಾಮಪ್ಪ ಹಂಚಿನಮನಿ ಅವರಿಗೆ `ಗಾನ ಗಾರುಡಿಗ ಬಸವಲಿಂಗಯ್ಯ ಹಿರೇಮಠ' ರಾಜ್ಯ ಪ್ರಶಸ್ತಿ, 10,000 ನಗದು ನೀಡಿ ಗೌರವಿಸಲಾಯಿತು.

ಶ್ರೀ ನೀಲಕಂಠ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಡಾ. ಜ್ಯೋತಿರ್ಲಿಂಗ ಹೊನಕಟ್ಟಿ, ವಿಶ್ವೇಶ್ವರಿ ಹಿರೇಮಠ ಮಾತನಾಡಿದರು. ಪ್ರೊ. ಎನ್.ಎಸ್. ಗಲಗಲಿ ಅಧ್ಯಕ್ಷತೆ ವಹಿಸಿದ್ದರು. ಡಾ. ಎನ್.ಎ. ಚರಂತಿಮಠ, ಗಜಾನನ ಚಿನಗುಡಿ, ಬೈಲೂರಿನ ನಂದಿಹಳ್ಳಿ, ಸಂಗಮೇಶ ಹಿರೇಮಠ, ಇತರರಿದ್ದರು.

ಜಾನಪದ ಸಂಶೋಧನಾ ಕೇಂದ್ರದ ಅಧ್ಯಕ್ಷ ಗುರು ಕಲ್ಮಠ ಸ್ವಾಗತಿಸಿದರು. ಡಾ. ಬಾಳಪ್ಪ ಚಿನಗುಡಿ ನಿರೂಪಿಸಿದರು. ನಾಗಭೂಷಣ ಹಿರೇಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net