

ವಿಜಯವಾಣಿ ಸುದ್ದಿಜಾಲ ಗದಗ
ತಾಲೂಕಿನ ಕಳಸಾಪೂರ ಗ್ರಾಮದ ಬಸವಕೇಂದ್ರದಲ್ಲಿ ಮಂಗಳವಾರ ಅಂಗನವಾಡಿ ಮಕ್ಕಳು, ಶಾಲಾ ಮಕ್ಕಳಿಗೆ ಹಾಲು ಉಣಿಸುವ ಕಾರ್ಯಕ್ರಮ ಜರುಗಿತು.
ಬಸವಕೇಂದ್ರದ ಅಧ್ಯಕ್ಷ ಮಲ್ಲಿಕಾರ್ಜುನ ಖಂಡಮ್ಮನವರ ಮಾತನಾಡಿ, ಹಾಲು ಹಾವಿಗೆ ಆಹಾರವೇ ಅಲ್ಲ. ಹಾಲು ಎರೆಯುವ ವೇಳೆ ನಾಗಪ್ಪ ನೈಜರೂಪದಲ್ಲಿ ಬಂದರೆ ಹಾಲಿನ ಬಟ್ಟಲು ಚೆಲ್ಲಿ ದಿಕ್ಕೆಟ್ಟು ಓಡುವದೊಂದಿಗೆ ದಾರಿ ಇಲ್ಲವೆ, ದಿಟದನಾಗರ ಬಂದಾಗ ಕಲ್ಲು ದೊಣ್ಣೆಗಳಿಂದ ಕೊಲ್ಲದೆ ಬಿಡುವರೆ ಈ ನಾಗಭಕ್ತರು ಎಂದು ಬಸವಣ್ಣನವರು ಹೇಳಿದ್ದಾರೆ ಎಂದರು.
ಶಿವನಗೌಡರ ಮಾತನಾಡಿ, ಪ್ರತಿವರ್ಷ ಬಸವ ಪಂಚಮಿ ನಿಮಿತ್ಯ ಕಲ್ಲು ಮಣ್ಣಿನ ಹಾವಿಗೆ ಅಭಿಷೇಕ ಬದಲಾಗಿ ಶಾಲಾ ಮತ್ತು ಅಂಗನವಾಡಿ ಮಕ್ಕಳಿಗೆ, ಬಡಮಕ್ಕಳಿಗೆ ಹಾಲು ಉಣಿಸುವುದು ಬಹಳ ಉಪಯುಕ್ತವಾಗಿದೆ. ಧರ್ಮ, ದೇವರುಗಳ ಹೆಸರಿನಲ್ಲಿ ಹಾಲು ಅಭಿಷೇಕ ಅಲ್ಲದೇ ಲದೀಪೋತ್ಸವ ಹೆಸರಿನಲ್ಲಿ ಖಾದ್ಯ ತೈಲ ಪೋಲು ನಿಂತರೆ ಈ ದೇಶದ ಒಳಿತಾಗುತ್ತದೆ ಎಂದರು.
ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಸ್ವಸಹಾಯ ಗುಂಪಿನ ಸಹಾಯಕಿಯರು ಗ್ರಾಮದ ಗುರು ಹಿರಿಯರ ಸಮ್ಮುಖದಲ್ಲಿ ಹಾಲು ಬಿಸ್ಕಿಟ್ ವಿತರಿಸಲಾಯಿತು.
ನಾಗಪ್ಪ ಅಣ್ಣಿಗೇರಿ ಅಧ್ಯತೆ ವಹಿಸಿದ್ದರು. ಎಸ್. ಬಿ. ಗೌಡರ, ಯಲ್ಲಪ್ಪ ಹಾದಿಮನಿ, ಶರಣಪ್ಪ ಹುಯಿಲಗೋಳ, ಗುರುರಾಜ ಹಾದಿಮನಿ ಇದ್ದರು.