ಶಿಖಾಮಣಿ-ವಚನ ಸಾಹಿತ್ಯ ಅಳವಡಿಸಿಕೊಂಡರೆ ಬದುಕು ಸಾರ್ಥಕ

1BK4
ಬಸವಕಲ್ಯಾಣದ ಸಂಸ್ಥಾನ ಗವಿಮಠದಲ್ಲಿ ಆಯೋಜಿಸಿದ್ದ ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ಕುರಿತ ೮ನೇ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿದರು. ಲೋಕೇಶ ಮೋಳಕೆರೆ, ಪ್ರೊ.ರುದ್ರೇಶ್ವರ ಗೋರ್ಟಾ, ರಮೇಶ ರಾಜೋಳೆ ಇತರರಿದ್ದರು.
Published on

ಬಸವಕಲ್ಯಾಣ: ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ಸರಿಯಾಗಿ ಅರಿತು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕಿನಲ್ಲಿ ಸಾರ್ಥಕತೆ ಕಾಣಲು ಸಾಧ್ಯ ಎಂದು ಪ್ರೊ.ರುದ್ರೇಶ್ವರ ಗೋರ್ಟಾ ಹೇಳಿದರು.

ಶ್ರಾವಣ ಮಾಸಜ ನಿಮಿತ್ತ ಸಂಸ್ಥಾನ ಗವಿಮಠ ಟ್ರಸ್ಟ್ ಹಾಗೂ ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆ ತಾಲೂಕು ಘಟಕ ಸಹಯೋಗದಲ್ಲಿ ಸಂಸ್ಥಾನ ಗವಿಮಠದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ಕುರಿತ ೮ನೇ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ವಿಕಾಸ ಅಕಾಡೆಮಿ ತಾಲೂಕು ಸಂಚಾಲಕ ಲೋಕೇಶ ಮೋಳಕೆರೆ ಮಾತನಾಡಿ, ಗವಿಮಠದ ಪೂಜ್ಯ ಅಭಿನವ ಶ್ರೀಗಳ ಸಮಾಜಮುಖಿ ಕಾರ್ಯ ಮತ್ತು ಮಾರ್ಗದರ್ಶನವೇ ನನಗೆ ಸಮಾಜ ಸೇವಾ ಕಾರ್ಯಗಳಿಗೆ ಪ್ರೇರಣೆಯಾಗಿದೆ. ಶ್ರೀಗಳು ಹಿಂದೆ ತಮ್ಮ ಜನ್ಮ ದಿನವನ್ನು ಚಟಗಳ ವಿರುದ್ಧ ಯುವಕರಲ್ಲಿ ಜಾಗೃತಿ ಮೂಡಿಸುವ ಅಭಿಯಾನದ ಮೂಲಕ ಆಚರಿಸಿಕೊಂಡಿದ್ದರು. ಈಗ ೨೭ರಂದು ಜನ್ಮ ದಿನದ ನಿಮಿತ್ತ ಪ್ಲಾಸ್ಟಿಕ್ ಮುಕ್ತ ಜೀವನ ಸಂದೇಶದೊಂದಿಗೆ ಪಾದಯಾತ್ರೆ ನಡೆಸಲಿದ್ದಾರೆ. ಈ ಮಹತ್ವದ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಸಂಸ್ಥಾನ ಗವಿಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಆಶೀರ್ವಚನ ನೀಡಿ, ಶರೀರದ ಎಲ್ಲ ಅಂಗಾಂಗಗಳ ಕ್ರಿಯೆಗೆ ಪ್ರಾಣವೇ ಮೂಲ. ಈ ಮೂಲ ಪ್ರಾಣಕ್ಕೆ ಶಿವನೇ ಆಧಾರನು. ಹೀಗಾಗಿ ಈ ಮೂಲಕ್ಕೆ ಪ್ರಾಣಲಿಂಗ ಎಂದು ಕರೆಯಲಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ರಮೇಶ ರಾಜೋಳೆ ಮಾತನಾಡಿದರು.

ಸಂಸ್ಥಾನ ಗವಿಮಠ ಟ್ರಸ್ಟ್ ಕಾರ್ಯಾಧ್ಯಕ್ಷ ಶರಣಪ್ಪ ಬಿರಾದಾರ, ಸಂಸ್ಥೆ ಕಾರ್ಯದರ್ಶಿ ರಾಕೇಶ ಪುರವಂತ, ಮಲ್ಲಿಕಾರ್ಜುನ ಅಲಶೆಟ್ಟೆ, ಪ್ರಾಚಾರ್ಯ ಎ.ಜಿ. ಪಾಟೀಲ್, ಗೋವಿಂದರೆಡ್ಡಿ ಕೋತಾಪಲ್ಲೆ, ಶಿಕ್ಷಕ ಮಲ್ಲಿಕಾರ್ಜುನ ಅಲಗುಡೆ, ವೀರೇಶ ಗಡೇದಾರ, ಕಲಾವತಿ ಗಡೇದಾರ, ಸಂಗೀತಾ ಬಿರಾದಾರ, ವನಿತಾ ಬಿರಾದಾರ, ರೇಖಾಚಿಟ್ಟೆ, ಮಹಾನಂದಾ ಪುರವಂತ, ಜ್ಯೋತಿ, ಪುರವಂತ, ಪೂರ್ಣಿಮಾ ಸ್ವಾಮಿ ಇತರರಿದ್ದರು.

ನಿವೃತ್ತ ಕೃಷಿ ಅಧಿಕಾರಿ ಬಸವಂತಪ್ಪ ಲವಾರೆ ಸ್ವಾಗತಿಸಿದರು. ಕುಮಾರಿ ಆರಾದ್ಯ ಪುರವಂತ ಹಾಗೂ ಪ್ರಗತಿ ಹುಡಗಿ ಪ್ರಾರ್ಥನಾ ಗೀತೆ ಹಾಡಿದರು. ವಿದ್ಯಾರ್ಥಿ ಶರಣಬಸಪ್ಪ ಅಲಗುಡೆ ಮಂಗಳಾರುತಿ ಹಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net