ನಾಡಿಗೆ ಡಾ.ಚನ್ನವೀರ ಶಿವಾಚಾರ್ಯರ ಕೊಡುಗೆ ಅಪಾರ

Oplus_131072
ಹಾರಕೂಡ ಹಿರೇಮಠದಲ್ಲಿ ಕಲಬುರಗಿಯ ಹಿರಿಯ ಶರಣ ಸಾಹಿತಿ ಸುಭಾಷಚಂದ್ರ ಕಶೆಟ್ಟಿ ಬಾಚನಾಳ ರಚಿಸಿರುವ ನಡೆದಾಡುವ ದೇವರು ಕೃತಿಯನ್ನು ಸಾಹಿತಿ ಡಾ.ಗವಿಸಿದ್ದಪ್ಪ ಎಚ್.ಪಾಟೀಲ್ ಲೋಕಾರ್ಪಣೆ ಮಾಡಿದರು. ಶ್ರೀ ಡಾ.ಚನ್ನವೀರ ಶಿವಾಚಾರ್ಯರು, ಪ್ರಕಾಶಕ ಬಸವರಾಜ ಕೊನೇಕ್, ಸುಭಾಷಚಂದ್ರ ಕಶೆಟ್ಟಿ, ಡಾ.ಶರಣಬಸಪ್ಪ ವಡ್ಡನಕೇರಿ, ಡಾ.ಸುನೀಲ ಜಾಬಾದಿ ಇತರರಿದ್ದರು.
Published on

ಬಸವಕಲ್ಯಾಣ: ಕಲ್ಯಾಣ ಕರ್ನಾಟಕಕ್ಕೆ ಅಷ್ಟೇ ಅಲ್ಲ. ಇಡೀ ಕನ್ನಡ ನಾಡಿಗೆ ಸಾಮಾಜಿಕ, ಸಾಹಿತ್ಯಿಕ ಧಾರ್ಮಿಕ, ಶೈಕ್ಷಣಿಕ, ಕಲೆ, ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಲೋಕಕ್ಕೆ ಹಾರಕೂಡದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ನೀಡಿದ ಕೊಡುಗೆ ಅಪಾರ ಎಂದು ಹಿರಿಯ ಸಾಹಿತಿ ಡಾ.ಗವಿಸಿದ್ದಪ್ಪ ಪಾಟೀಲ್ ಹೇಳಿದರು.

ಹಾರಕೂಡ ಸಂಸ್ಥಾನ ಹಿರೇಮಠದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಸುಭಾಷಚಂದ್ರ ಕಶೆಟ್ಟಿ ಬಾಚನಾಳ ಅವರು ರಚಿಸಿರುವ ನಡೆದಾಡುವ ದೇವರು ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಹಾರಕೂಡ ಮಠದ ಪರಂಪರೆಯ ಜತೆಗೆ ಶ್ರೀ ಡಾ.ಚನ್ನವೀರ ಶಿವಾಚಾರ್ಯರ ಬಾಲ್ಯ, ಶಿಕ್ಷಣ, ಪಟ್ಟಾಧಿಕಾರ, ದಾಸೋಹ, ಅವರಿಗೆ ಬಂದ ಪ್ರಶಸ್ತಿ, ಮಠದಿಂದ ನೀಡುವ ಪ್ರಶಸ್ತಿ, ಮಠ ಪ್ರಕಟಿಸಿ ಪುಸ್ತಕಗಳ ವಿವರ ತುಂಬಾ ಸರಳವಾಗಿ ಜನ ಸಾಮಾನ್ಯರಿಗೂ ಅರ್ಥವಾಗುವ ಹಾಗೆ ಚಿತ್ರಿಸಿದ ಲೇಖಕ ಕಶೆಟ್ಟಿ ಅವರು ಕಾರ್ಯ ಮೆಚ್ಚಬೇಕು. ಇಳಿವಯಸ್ಸಿ ನಲ್ಲೂ ಅವರು ಬರೆದ ರೀತಿ ನಮಗೆ ಆಶ್ಚರ್ಯ ಹುಟ್ಟಿಸಿದೆ. ಶ್ರೀಗಳ ಸಮಾಜಮುಖಿ ಕಾರ್ಯದ ಮೇಲೆ ಬೆಳಕು ಚೆಲ್ಲುವ ಗ್ರಂಥ ಇದಾಗಿದೆ ಎಂದು ಹೇಳಿದರು.

ಲೇಖಕ ಸುಭಾಷಚಂದ್ರ ಕಶೆಟ್ಟಿ ಬಾಚನಾಳ ಮಾತನಾಡಿ, ನನಗೆ ಶರಣರು, ಸಂತರ ಬಗ್ಗೆ ಅಪಾರ ನಂಬುಗೆ. ಹಾರಕೂಡ ಶ್ರೀಗಳ ಕುರಿತು ನನಗೆ ತಿಳಿದ ವಿಚಾರಗಳನ್ನು ಮನಃ ಪೂರ್ವಕ ಚಿತ್ರಿಸಿz್ದೆÃನೆ. ಶೀಗಳ ಸಾಧನೆ ಸಮುದ್ರ, ಅದರೊಳಗಿನ ಬೊಗಸೆ ಮಾತ್ರ ಸಾಹಿತ್ಯದ ಮೂಲಕ ಹಿಡಿದಿಟ್ಟಿರುವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಿದ್ಧಲಿಂಗೇಶ್ವರ ಪ್ರಕಾಶನದ ಪುಸ್ತಕೋದ್ಯಮಿ ಬಸವರಾಜ ಕೊನೇಕ್ ಮಾತನಾಡಿ, ಕಲ್ಯಾಣ ಕರ್ನಾಟಕದಲ್ಲಿ ಇಂತಹ ಅಪರೂಪದ ಜಾತ್ಯಾತೀತ ಸ್ವಾಮಿಗಳನ್ನು ನಾನು ಕಂಡಿಲ್ಲ. ಜತೆಗೆ ಶ್ರೀಗಳ ಸಾಹಿತ್ಯ, ಸಾಂಸ್ಕೃತಿಕ ಕಾರ್ಯ ನಾಡಿಗೆ ಸಂದಿದೆ. ಅವರು ರಚಿಸಿರುವ ಕೃತಿ ನಮ್ಮ ಪ್ರಕಾಶನದಿಂದ ಪ್ರಕಟಿಸಿದ್ದು ಸಂತಸ ತಂದಿದೆ ಎಂದು ಹೇಳಿದರು.

ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಪ್ರಕಾಶಕ ಸಿದ್ದಲಿಂಗ ಕೊನೇಕ್, ಉದ್ಯಮಿ ಶಿವಾನಂದ ಕಶೆಟ್ಟಿ, ಮಲ್ಲಿನಾಥ ಹಿರೇಮಠ, ಅಪ್ಪಣ್ಣ ಜನವಾಡ, ಚನ್ನಬಸಪ್ಪ ಕನಕಪುರ ಇತರರಿದ್ದರು. ಸಾಹಿತಿ ಡಾ.ಶರಣಬಸಪ್ಪ ವಡ್ಡನಕೇರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶಹಬಾದ್ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಡಾ.ಚಿದಾನಂದ ಕುಡ್ಡನ್ ವಂದಿಸಿದರು. ಕಲಬುರಗಿ ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಸುನೀಲ ಜಾಬಾದಿ ನಿರೂಪಣೆ ಮಾಡಿದರು. ಕಾರ್ತಿಕಸ್ವಾಮಿ ವಚನ ಗಾಯನ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net