

ಬಸವಕಲ್ಯಾಣ: ಕೇಂದ್ರದ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಅಧಿಕಾರಿಗಳನ್ನು ಒಳಗೊಂಡ ತಂಡದಿಂದ ಶನಿವಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಯರಂಡಗಿ ಹಾಗೂ ನಾರಾಯಣಪುರ ಗ್ರಾಪಂ ವ್ಯಾಪ್ತಿಯಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಪರಿಶೀಲಿಸಲಾಯಿತು.
ಯೋಜನೆಯಡಿ ಗ್ರಾಪಂ ವ್ಯಾಪ್ತಿಯಲ್ಲಿ ಅನುಷ್ಠಾನಗೊಂಡ ಬಾವಿ, ಪ್ಲ್ಯಾಂಟೇಷನ್, ಸಿಸಿಟಿ, ಎರೆಹುಳ ಗೊಬ್ಬರ ಘಟಕ ಕಾಮಗಾರಿ ಹಾಗೂ ಪಿಎಂ ಹೌಸಿಂಗ್ ಕಾಮಗಾರಿ ಸೇರಿ ವಿವಿಧ ಕಾಮಗಾರಿಗಳನ್ನು ಅಧಿಕಾರಿಗಳಾದ ತಿಮ್ಮಣ್ಣಸಿಂಗ್ ಹಾಗೂ ಪ್ರೀತಿ ಕುಮಾರಿ ಜಿಲ್ಲೆಯ ಅಧಿಕಾರಿಗಳ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಜಿಪಂ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ಜಿಪಂ ಎಎಸ್ ಜಯಪ್ರಕಾಶ ಚವ್ಹಾಣ್, ತಾಪಂ ಸಹಾಯಕ ನಿರ್ದೇಶಕ ಸಂತೋಷ ಚವ್ಹಾಣ್, ಎಡಿಪಿಸಿ ದೀಪಕ ಕಡಿಮನಿ, ಪಿಡಿಒ ಪ್ರಶಾಂತರೆಡ್ಡಿ ಮಾಲಿಪಾಟೀಲ್, ಜ್ಯೋತಿ ಕಾವಡೆ, ತಾಂತ್ರಿಕ ಸಂಯೋಜಕ ಅಮರನಾಥ ಪಾಟೀಲ್, ಟಿಎಂಐಎಸ್ ವರದಾ ಶಂಕರ, ಐಇಸಿ ಸಂಯೋಜಕ ವೀರಾರೆಡ್ಡಿ, ತಾಲೂಕು ನೋಡಲ್ ಅಧಿಕಾರಿ (ವಸತಿ) ಶೇರಖಾನ್, ತಾಂತ್ರಿಕ ಸಹಾಯಕರಾದ ಜಲೀಲ್ ಸಾಬ್, ಶ್ರೀಕಾಂತ ಪಾಟೀಲ್, ಮಾಣಿಕ ಮೋರೆ, ಜಾನ್, ನವಾಜಖಾನ್ ಇತರರಿದ್ದರು.