ವಚನಗಳ ಸಾರಗಳಿಂದ ಜೀವನ ಸಾರ್ಥಕ

11 BK 01
ಬಸವಕಲ್ಯಾಣದಲ್ಲಿ ವಿಶ್ವ ಬಸವ ಧರ್ಮ ಟ್ರಸ್ಟ್ ವತಿಯಿಂದ ಶುಕ್ರವಾರ ಸಂಜೆ ಆಯೋಜಿಸಿದ್ದ ತಿಂಗಳ ಅನುಭವ ಮಂಟಪ-೨೬ ಸಮಾರಂಭವನ್ನು ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಉದ್ಘಾಟಿಸಿದರು. ಶ್ರೀ ಗುರುಬಸವ ಪಟ್ಟದ್ದೇವರು, ಎಸ್.ಬಿ.ದುರ್ಗೆ, ಜಗನ್ನಾಥ ಪತಂಗೆ, ರಾಜೇಶ್ವರಿ ಖೂಬಾ ಇದ್ದರು.
Published on

ಬಸವಕಲ್ಯಾಣ: ಬಸವಣ್ಣನವರು ಅಂದು ನಿರ್ಭಿತವಾದ ಸಮಾನತೆಯ, ಸ್ವಾತಂತ್ರತೆಯ ಸಮಾಜವನ್ನು ನಿರ್ಮಾಣ ಮಾಡಿದ್ದರು. ನಮ್ಮ ಭೌತಿಕ ಚಿಂತೆಗಳನ್ನು ದೂರವಿಟ್ಟು ಶರಣರ ವಚನಗಳ ಕುರಿತು ಚಿಂತನೆ ಮಾಡಿ ಬದುಕು ಹಸನಾಗಿಸಿಕೊಳ್ಳಬೇಕು ಎಂದು ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.

ಪಟ್ಟಣದ ಸೀತಾ ಕಾಲನಿಯಲ್ಲಿ ವಿಶ್ವ ಬಸವ ಧರ್ಮ ಟ್ರಸ್ಟ್ ವತಿಯಿಂದ ಶುಕ್ರವಾರ ಸಂಜೆ ಆಯೋಜಿಸಿದ್ದ ತಿಂಗಳ ಅನುಭವ ಮಂಟಪ-೨೬ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ವಚನಗಳಲ್ಲಿ ಜೀವನದ ಅನೇಕ ಸಮಸ್ಯೆಗಳಿಗೆ ಪರಿಹಾರವಿದೆ. ಶರಣರ ವಚನಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.

ನೇತೃತ್ವ ವಹಿಸಿದ ಭಾಲ್ಕಿ ಹಿರೇಮಠದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಬಸವಾದಿ ಶರಣರು ನಡೆದಾಡಿದ ಈ ಬಸವಕಲ್ಯಾಣವು ಪವಿತ್ರ ಸ್ಥಳವಾಗಿದೆ. ಇಂತಹ ಸ್ಥಳದಲ್ಲಿ ನಾವೆಲ್ಲರೂ ಓಡಾಡುತ್ತಿರುವುದು ಅಹೋಭಾಗ್ಯವಾಗಿದೆ. ಪೂಜ್ಯರ ಮಾರ್ಗದರ್ಶನದಲ್ಲಿ ನಡೆಯಲಿರುವ ಅನುಭವ ಮಂಟಪ ಉತ್ಸವದಲ್ಲಿ ನಾವೆಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಹೇಳಿದರು.

ಶ್ರೀ ಬಸವಲಿಂಗ ಸ್ವಾಮೀಜಿ ಪ್ರಾರ್ಥಿಸಿದರು. ಎಸ್.ಬಿ.ದುರ್ಗೆ ಸಮಾರಂಭ ಉದ್ಘಾಟಿಸಿದರು. ಜಗನ್ನಾಥ ಪತಂಗೆ, ರಾಜೇಶ್ವರಿ ಖೂಬಾ ಇತರರಿದ್ದರು.
ಲಕ್ಷ್ಮೀತಾಯಿ ಅವರಿಂದ ವಚನಗೀತೆ ನಡೆಯಿತು. ಚನ್ನಬಸವಪ್ಪ ಶೆಟೆಪ್ಪ ಸ್ವಾಗತಿಸಿದರು. ಸಂಗಮೇಶ ತೊಗರಖೇಡ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net