ದೇಶ ಕಟ್ಟುವಲ್ಲಿ ಸ್ತ್ರೀಯರ ಕೊಡುಗೆ ಅಪಾರ

20BK1
ಬಸವಕಲ್ಯಾಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಎರಡನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶ ರಾಘವೇಂದ್ರ ಚನ್ನಬಸಪ್ಪನವರ್ ಉದ್ಘಾಟಿಸಿದರು. ನ್ಯಾ.ಬಿ.ಚೆನ್ನಪ್ಪ, ನ್ಯಾ.ಭರತ ಯೋಗೇಶ್, ಗೌತಮ ಸಿಂಧೆ, ರವಿರಾಜ್, ಡಾ.ಸುನೀತಾ ಇತರರಿದ್ದರು.
Published on

ಬಸವಕಲ್ಯಾಣ: ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಅತ್ಯಂತ ಗೌರವ ಹಾಗೂ ಪೂಜನೀಯ ಸ್ಥಾನ ನೀಡಲಾಗಿದೆ. ತಾವು ಯಾವುದೇ ರೀತಿಯಲ್ಲಿ ಕಡಿಮೆ ಇಲ್ಲ ಎನ್ನುವುದನ್ನು ಹಲವು ಕ್ಷೇತ್ರಗಳಲ್ಲಿ ಶಕ್ತಿ ಸಾಮರ್ಥ್ಯದ ಮೂಲಕ ಸೀಯರು ನಿರೂಪಿಸಿದ್ದು, ದೇಶ ಕಟ್ಟುವಲ್ಲಿ ಅವರ ಕೊಡುಗೆ ಅಪಾರ ಎಂದು ೨ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶ ರಾಘವೇಂದ್ರ ಎಸ್.ಚನ್ನಬಸಪ್ಪನವರ್ ಹೇಳಿದರು.

ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ಆಡಳಿತ, ತಾಪಂ, ಶಿಶು ಅಭಿವೃದ್ಧಿ ಯೋಜನೆ ಹಾಗೂ ಆರೋಗ್ಯ, ಶಿಕ್ಷಣ, ಪೊಲೀಸ್ ಇಲಾಖೆ ವತಿಯಿಂದ ಬೇಟಿ ಬಜಾವೊ, ಬೇಟಿ ಪಡಾವೊ ಯೋಜನೆಯಡಿ ಅಂತಾರಾಷ್ಟೀಯ ಮಹಿಳಾ ಹಾಗೂ ಆರೋಗ್ಯ ದಿನಾಚರಣೆ ನಿಮಿತ್ತ ನಗರದ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆಯರಲ್ಲಿ ಅದ್ಭುತ ಪ್ರತಿಭೆ ಇದ್ದು, ಅವಕಾಶ ಕೊಟ್ಟರೆ ಸಾಧನೆ ಸಾಧ್ಯ ಎನ್ನುವದನ್ನು ಆರ್‌ಸಿಬಿ ಮಹಿಳಾ ತಂಡ ಗೆಲ್ಲುವ ಮೂಲಕ ಸಮಾಜಕ್ಕೆ ಸಂದೇಶ ನೀಡಿದ್ದಾರೆ ಎಂದರು.

ಸಿವಿಲ್ ಮತ್ತು ಜೆಎಂಎಫ್​ಸಿ ನ್ಯಾಯಾಧೀಶರೂ ಆದ ತಾಲೂಕು ಕಾನೂನು ಸೇವೆಗಳ ಸಮಿತಿ ಸದಸ್ಯ ಕಾರ್ಯದರ್ಶಿ ಭರತ ಯೋಗೇಶ್ ಕರಗುದರಿ ಮಾತನಾಡಿ, ಕಾನೂನಿನ ಬಗ್ಗೆ ಪ್ರತಿಯೊಬ್ಬರಿಗೆ ಅರಿವು ಅವಶ್ಯಕವಾಗಿದ್ದು, ಮಕ್ಕಳಿಗೆ ಆಟ, ಪಾಠ ಮತ್ತು ಊಟದ ಜತೆಗೆ ಕಾನೂನು ಬಗ್ಗೆಯೂ ಜಾಗೃತಿ ಮೂಡಿಸಬೇಕು. ೧೮ ವರ್ಷ ಭರ್ತಿಯಾಗುವವರೆಗೆ ಮಕ್ಕಳ ಕೈಗೆ ಬೈಕ್ ಕೊಡಬಾರದು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ ಸಿಡಿಪಿಒ ಗೌತಮ ಸಿಂಧೆ ಮಾತನಾಡಿ, ಮಹಿಳೆಯರ ಪ್ರಗತಿಯಲ್ಲಿ ದೇಶದ ಪ್ರಗತಿ ಅಡಗಿದೆ. ಸಾಮಾಜಿಕ ಆರ್ಥಿಕ, ಶೈಕ್ಷಣಿಕ ಸೇರಿ ಎಲ್ಲ ಕ್ಷೇತ್ರದಲ್ಲಿ ಮಹಿಯರು ಪ್ರಗತಿ ಸಾಧಿಸಬೇಕು. ಇದಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ. ಸಮಾಜದಲ್ಲಿ ಸೀಯರಿಗೆ ಗೌರವದಿಂದ ನೋಡುವ ಮನೋಭಾವ ಪ್ರತಿಯೊಬ್ಬರಲ್ಲಿಯೂ ಬರಬೇಕು ಎಂದರು.

ಗುಲ್ಬರ್ಗ ವಿವಿ ಕನ್ನಡ ವಿಭಾಗದ ಅತಿಥಿ ಉಪನ್ಯಾಸಕಿ ಡಾ.ಸುನೀತಾ ವಿಶೇಷ ಉಪನ್ಯಾಸ ನೀಡಿದರು. ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ, ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಚನ್ನಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ ಮೈಲಾರೆ, ಮೈಸೂರು ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ನಿರ್ದೇಶಕಿ ಸರಸ್ವತಿ, ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಶ್ರೀದೇವಿ ಚುವಡೆ, ಶಿಶು ಅಭಿವೃದ್ಧಿ ಯೋಜನೆ ಸಹಾಯಕ ಅಧಿಕಾರಿ ರವಿರಾಜ್, ಅಂಗನವಾಡಿ ಮೇಲ್ವಿಚಾರಕಿ ಶ್ರೀದೇವಿ ಬಿರಾದಾರ್ ಇತರರಿದ್ದರು.

ಸೀಮಾ ಚಟ್ನಳ್ಳಿ ಸ್ವಾಗತಿಸಿದರು. ನವಲಿಂಗ ಪಾಟೀಲ್ ನಿರೂಪಣೆ ಮಾಡಿದರು. ಯಶೋಧಾ ಹಾಗೂ ಸುನೀತಾ ಹಾರಕೂಡೆ ಪ್ರಾರ್ಥನಾ ಗೀತೆ ಹಾಡಿದರು. ಕಲಾವಿದ ಕಲ್ಯಾಣರಾವ ಮದರಗಾಂವಕರ್, ಸ್ವಾತಿ ಕೋಟೆ, ವಿಜಯಶ್ರೀ ಶೀಲವಂತ, ಅಭಿಷೇಕ್ ಪ್ರಸಾದ ಕನ್ನಡ ಗೀತೆಗಳನ್ನು ಹಾಡಿ ಗಮನ ಸೆಳೆದರು.

ವಿದೇಶಿ ಪ್ರತಿನಿಧಿಗಳು ಭಾಗಿ: ಮಹಿಳಾ ಹಾಗೂ ಆರೋಗ್ಯ ದಿನಾಚರಣೆ ನಿಮಿತ್ತ ಸಾಧಕ ಮಹಿಳೆಯರ ಸನ್ಮಾನದ ಜತೆಗೆ ಕಾನೂನು ಅರಿವು ನೀಡುವ ಮೂಲಕ ಅರ್ಥಪೂರ್ಣವಾಗಿ ನಡೆದ ಕಾರ್ಯಕ್ರಮಕ್ಕೆ ಆಹ್ವಾನಿತರಾಗಿ ವಿದೇಶಿ ಪ್ರತಿನಿಧಿಗಳು ಆಗಮಿಸಿದ್ದ ವಿಶೇಷ. ಜಿಂಬಾಬ್ವೆ ದೇಶದ ಕಾರ್ಮಿಕ ಸಚಿವಾಲಯದ ಉಪ ನಿರ್ದೇಶಕ ಆಂಡ್ರ್ಯುವ್ಡ ಮಾರ್ಕ್ಸ್ ಅಲ್ಬರ್ಟ್, ಕಾರ್ಮಿಕ ಇಲಾಖೆ ಉಪ ನಿರ್ದೇಶಕಿ ಗ್ರೇಸ್ ಕಿನ್ಯಾಯಿ ತಂಡದೊಂದಿದೆ ಭಾಗವಹಿಸಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net